ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯಕ್ಕೆ ಏನೂ ಹೇಳಲಾರೆ: ವೊಡಾಫೋನ್‌ ಐಡಿಯಾ ಮುಖ್ಯಸ್ಥ ಬಿರ್ಲಾ

Last Updated 18 ಫೆಬ್ರುವರಿ 2020, 11:58 IST
ಅಕ್ಷರ ಗಾತ್ರ

ನವದೆಹಲಿ: ತರಂಗಾಂತರ ಬಳಕೆ ಹಾಗೂ ಪರವಾನಗಿ ಶುಲ್ಕ ಸೇರಿದಂತೆ ವೊಡಾಫೋನ್‌ ಐಡಿಯಾ ಸರ್ಕಾರಕ್ಕೆ ಒಟ್ಟು ₹53,000 ಕೋಟಿ ಪಾವತಿಸಬೇಕಿದ್ದು, ಸೋಮವಾರ ₹2,500 ಕೋಟಿ ಮಾತ್ರ ಪಾವತಿಸಿದೆ. ಬಾಕಿ ಪಾವತಿಗೆ ಸಂಬಂಧಿಸಿದಂತೆ ವೊಡಾಫೋನ್‌ ಐಡಿಯಾ ಮುಖ್ಯಸ್ಥ ಕುಮಾರ್‌ ಮಂಗಳಂ ಬಿರ್ಲಾ ಮಂಗಳವಾರ ದೂರ ಸಂಪರ್ಕ ಇಲಾಖೆ ಕಾರ್ಯದರ್ಶಿ ಅನ್ಷು ಪ್ರಕಾಶ್‌ ಅವರನ್ನು ಭೇಟಿ ಮಾಡಿದ್ದಾರೆ.

'ಸದ್ಯಕ್ಕೆ ಏನೂ ಹೇಳಲಾರೆ' ಎಂದು ಭೇಟಿ ಬಳಿಕ ಬಿರ್ಲಾ ಹೇಳಿದ್ದಾರೆ. ಸರ್ಕಾರ ವೊಡಾಫೋನ್ಬ್ಯಾಂಕ್‌ಭದ್ರತಾ ಠೇವಣಿ ನಗದೀಕರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ.ಭದ್ರತಾ ಠೇವಣಿ ನಗದೀಕರಿಸಿಕೊಳ್ಳದಂತೆ ಸರ್ಕಾರಕ್ಕೆ ಆದೇಶಿಸಲುಸೋಮವಾರ ಹಿರಿಯ ಅಡ್ವೊಕೇಟ್‌ ಮುಕುಲ್‌ರೋಹತಗಿ ಸುಪ್ರೀಂ ಕೋರ್ಟ್‌ಗೆಮನವಿ ಮಾಡಿದ್ದರು.

ವೊಡಾಫೋನ್‌ ಐಡಿಯಾ ದೂರ ಸಂಪರ್ಕ ಇಲಾಖೆಗೆ ₹2,500 ಕೋಟಿ ಪಾವತಿಸಿದ್ದು, ಇದೇ ವಾರದಲ್ಲಿ ₹1,000 ಕೋಟಿ ಪಾವತಿಸುವುದಾಗಿ ಭರವಸೆ ನೀಡಿದೆ. ಆದರೆ, ಪ್ರಸ್ತುತ ಪಾವತಿಸಿರುವ ಮೊತ್ತ ಒಟ್ಟು ಬಾಕಿಯ ಶೇ 5ಕ್ಕಿಂತಲೂ ಕಡಿಮೆ. ತಕ್ಷಣ ಬಾಕಿ ಪಾವತಿಗೆ ಒತ್ತಡ ಹೇರದಂತೆ ವೊಡಾಫೋನ್‌ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

'ಬಾಕಿ ಮೊತ್ತ ಪಾವತಿಗೆ ಪರಿಹಾರ ಮಾರ್ಗ ಇಲ್ಲದೇ ಹೋದಲ್ಲಿ ವೊಡಾಫೋನ್‌ ಐಡಿಯಾ ಸ್ಥಗಿತಗೊಳಿಸ ಬೇಕಾಗಬಹುದು. ನಮಗೆ ಯಾವುದೇ ಮಾರ್ಗ ದೊರೆಯದಿದ್ದರೆ, ಅಲ್ಲಿಗೆ ವೋಡಾಫೋನ್‌ ಐಡಿಯಾದ ಕಥೆ ಮುಗಿದಂತೆ...' ಎಂದು ಡಿಸೆಂಬರ್‌ನಲ್ಲಿ ಬಿರ್ಲಾ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT