ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪಿಎಫ್‌ ಹಣ ಹಿಂದೆ ಪಡೆಯಲು ಅನುಮತಿ

Last Updated 29 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಸದಸ್ಯರು ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೂರು ತಿಂಗಳ ಮೊತ್ತದಷ್ಟು ಹಣವನ್ನು ಮರಳಿ ಪಾವತಿಸದ ನಿಯಮದಡಿ ಹಿಂದೆ ಪಡೆಯುವುದಕ್ಕೆ ಕಾರ್ಮಿಕ ಸಚಿವಾಲಯ ಅನುಮತಿ ನೀಡಿದೆ.

ಕೊರೊನಾ ವೈರಸ್‌ ಹಾವಳಿಯಿಂದ ದಿಗ್ಬಂಧನ ಜಾರಿಗೆ ಬಂದಿರುವ ಕಾರಣಕ್ಕೆ ತುರ್ತು ಹಣಕಾಸು ಅಗತ್ಯ ಪೂರೈಸಿಕೊಳ್ಳಲು ‘ಇಪಿಎಫ್‌‘ ಸದಸ್ಯರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಕೇಂದ್ರ ಕಾರ್ಮಿಕ ಸಚಿವಾಲಯವು ಈ ಸಂಬಂಧ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ 1952ಕ್ಕೆ ತಿದ್ದುಪಡಿ ತಂದು ಶನಿವಾರವೇ ಅಧಿಸೂಚನೆ ಹೊರಡಿಸಿದೆ.

ಹಣ ವಾಪಸ್‌ ಪಡೆಯುವ ಸಂಬಂಧ ಸಲ್ಲಿಕೆಯಾಗುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ’ಇಪಿಎಫ್‌ಒ‘ ತನ್ನೆಲ್ಲ ಕಚೇರಿಗಳಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT