ಬುಧವಾರ, ಜೂನ್ 29, 2022
23 °C

ಲ್ಯಾಂಬರ್ಗಿನಿ ಹುರಾಕೆನ್ ಹೊಸ ಮಾದರಿ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸ್ಪೋರ್ಟ್ಸ್‌ ಕಾರುಗಳನ್ನು ತಯಾರಿಸುವ ಇಟಲಿಯ ಲ್ಯಾಂಬರ್ಗಿನಿ ಕಂಪನಿಯು ಭಾರತದ ಮಾರುಕಟ್ಟೆಗೆ ಹುರಾಕೆನ್ ಇವಿಒ ರಿಯರ್‌ ವೀಲ್‌ ಡ್ರೈವ್‌ ಸ್ಪೈಡರ್‌ ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ₹ 3.54 ಕೋಟಿ (ಎಕ್ಸ್‌ ಷೋರೂಂ).

ಹೊಸ ಮಾದರಿಯು ವಿ10 ಎಂಜಿನ್‌ ಹೊಂದಿದ್ದು 610 ಎಚ್‌ಪಿ ಶಕ್ತಿ ಹೊರಸೂಸಬಲ್ಲದು. ಗರಿಷ್ಠ ವೇಗ ಮಿತಿ ಗಂಟೆಗೆ 324 ಕಿಲೋ ಮೀಟರ್ ಇದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

‘ಭಾರತವು ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ನಮ್ಮ ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡಲು ನಿರಂತರವಾಗಿ ಹೂಡಿಕೆ ಮಾಡುತ್ತೇವೆ’ ಎಂದು ಕಂಪನಿಯ ಭಾರತದ ಮುಖ್ಯಸ್ಥ ಶರದ್‌ ಅಗರ್ವಾಲ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು