ಮಂಗಳವಾರ, ಜುಲೈ 5, 2022
23 °C

ಫಿಯೊನಾ ಸೂರ್ಯಕಾಂತಿ ಎಣ್ಣೆ ಮಾರುಕಟ್ಟೆಗೆ, ನಟಿ ರಶ್ಮಿಕಾ ಮಂದಣ್ಣ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಂಜ್ ಇಂಡಿಯಾ ಕಂಪನಿಯು ಫಿಯೊನಾ ಬ್ರ್ಯಾಂಡ್‌ ಅಡಿಯಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನಟಿ ರಶ್ಮಿಕಾ ಮಂದಣ್ಣ ಅವರು ಈ ಬ್ರ್ಯಾಂಡ್‌ಗೆ ರಾಯಭಾರಿ ಆಗಿದ್ದಾರೆ.

ಫಿಯೊನಾ ಬ್ರ್ಯಾಂಡ್‌ನ ಸೂರ್ಯಕಾಂತಿ ಎಣ್ಣೆಯಲ್ಲಿ ಎ, ಡಿ, ಇ ಮತ್ತು ಕೆ ವಿಟಮಿನ್‌ಗಳು ಹೇರಳವಾಗಿ ಇವೆ ಎಂದು ಕಂಪನಿ ಹೇಳಿದೆ. ಇದರಲ್ಲಿನ ವಿಟಮಿನ್‌ಗಳು ಸಾಧಾರಣ ರಿಫೈನ್ಡ್‌ ಸೂರ್ಯಕಾಂತಿ ಎಣ್ಣೆಗಿಂತ ಶೇಕಡ 50ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಹಾರಕ್ಕೆ ವರ್ಗಾವಣೆ ಆಗುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

‘ಫಿಯೊನಾ ನಮ್ಮದೇ ಬ್ರ್ಯಾಂಡ್‌. ಈ ಬ್ರ್ಯಾಂಡ್‌ಅನ್ನು ದಕ್ಷಿಣ ಭಾರತದ ಎಲ್ಲ ಕಡೆಗಳಲ್ಲಿ ಹಾಗೂ ನಂತರದಲ್ಲಿ ಇಡೀ ದೇಶದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುವುದು’ ಎಂದು ಕಂಪನಿಯ ಹಿರಿಯ ಅಧಿಕಾರಿ ಮಿಲಿಂದ್ ಆಚಾರ್ಯ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು