ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಸಸ್‌ ವಿನ್ಯಾಸ ಪ್ರಶಸ್ತಿ ಪ್ರದಾನ

Last Updated 13 ಜನವರಿ 2020, 17:59 IST
ಅಕ್ಷರ ಗಾತ್ರ

ಪುಣೆ: ಇಲ್ಲಿ ನಡೆದ ವಿನ್ಯಾಸ ಉತ್ಸವದಲ್ಲಿ ಲೆಕ್ಸಸ್‌ ವಿನ್ಯಾಸ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕೈಗಾರಿಕಾ ಕ್ಷೇತ್ರದಲ್ಲಿನ ವಿನ್ಯಾಸ ಗುರುತಿಸಿ ಸನ್ಮಾನಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.

ದೇಶದಾದ್ಯಂತ ಬಂದಿದ್ದ 885 ಪ್ರವೇಶ ಪತ್ರಗಳಲ್ಲಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಪರಿಕಲ್ಪನೆ ವಿಭಾಗದಲ್ಲಿನ ಪ್ರಶಸ್ತಿ ಪುರಸ್ಕೃತರಲ್ಲಿ ಕೆಲವರನ್ನು 2020ರ ಜಾಗತಿಕ ಲೆಕ್ಸಸ್‌ ವಿನ್ಯಾಸ ಪ್ರಶಸ್ತಿಗೆ ಅಂತಿಮಗೊಳಿಸಲಾಗಿದೆ. 10 ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.

‘ಈ ವಿನ್ಯಾಸ ಪ್ರಶಸ್ತಿ ಪ್ರದಾನವು ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ವರ್ಷದಿಂದ ವರ್ಷಕ್ಕೆ ಇದರ ಜನಪ್ರಿಯತೆ ಹೆಚ್ಚುತ್ತಿದೆ. ಇದು ದೇಶದಲ್ಲಿನ ವಿನ್ಯಾಸ ಪ್ರತಿಭೆಗೆ ನಿದರ್ಶನವಾಗಿದೆ. ವಿನ್ಯಾಸದ ಸಾಮರ್ಥ್ಯವು ಸುಸ್ಥಿರ ಭವಿಷ್ಯ ನಿರ್ಮಾಣಕ್ಕೆ ನೆರವಾಗಲಿದೆ ಎನ್ನುವುದು ನಮ್ಮ ನಂಬಿಕೆಯಾಗಿದೆ’ ಎಂದು ಲೆಕ್ಸಸ್‌ ಇಂಡಿಯಾದ ಅಧ್ಯಕ್ಷ ಪಿ. ಬಿ. ವೇಣುಗೋಪಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT