ಎಲ್‌ಐಸಿ: ಆರೋಗ್ಯ ವಿಮೆ ಮಾರಾಟ ಉತ್ತಮ ಸಾಧನೆ

7

ಎಲ್‌ಐಸಿ: ಆರೋಗ್ಯ ವಿಮೆ ಮಾರಾಟ ಉತ್ತಮ ಸಾಧನೆ

Published:
Updated:

ಬೆಂಗಳೂರು: ಭಾರತೀಯ ಜೀವ ವಿಮೆ ನಿಗಮದ (ಎಲ್‌ಐಸಿ) ದಕ್ಷಿಣ ಮಧ್ಯೆ ವಲಯವು, ಆರೋಗ್ಯ ವಿಮೆ ಯೋಜನೆಗಳ ಮಾರಾಟದಲ್ಲಿ ಉತ್ತಮ ಸಾಧನೆ ಮಾಡಿದೆ.

‘ಜೀವನ್‌ ಆರೋಗ್ಯ ಮತ್ತು ಕ್ಯಾನ್ಸರ್‌ ವಿಮೆ ಯೋಜನೆಗಳ ಮಾರಾಟವು ಉತ್ತಮ ಪ್ರಗತಿ ಸಾಧಿಸಿದೆ. ಇದುವರೆಗೆ 1.25 ಲಕ್ಷ ಕ್ಯಾನ್ಸರ್‌ ವಿಮೆ ಯೋಜನೆಗಳನ್ನು ಮಾರಾಟ ಮಾಡಲಾಗಿದೆ’ ಎಂದು ಸಂಸ್ಥೆಯ ಆರೋಗ್ಯ ವಿಮೆ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ವಿ. ಸತೀಶ್‌ ಕುಮಾರ್‌ ಹೇಳಿದ್ದಾರೆ.

‘ಕ್ಯಾನ್ಸರ್‌ಪೀಡಿತರಲ್ಲಿ ಶೇ 70ರಷ್ಟು ಜನರು ದುಬಾರಿ ಚಿಕಿತ್ಸಾ ವೆಚ್ಚ ಭರಿಸಲು ಪರಿತಪಿಸುತ್ತಾರೆ. ಈ ಕಾಯಿಲೆಯ ಚಿಕಿತ್ಸಾ ವೆಚ್ಚವು ಕೆಲ ತಿಂಗಳುಗಳಿಂದ ಕೆಲ ವರ್ಷಗಳವರೆಗೆ ಇರುತ್ತದೆ. ಈ ವೆಚ್ಚವು ₹ 5 ಲಕ್ಷದಿಂದ ₹ 50 ಲಕ್ಷದವರೆಗೆ ಇರಲಿದೆ. ಎಲ್‌ಐಸಿಯ ‘ಕ್ಯಾನ್ಸರ್‌ ವಿಮೆ’ ಯೋಜನೆಯು ಹಣಕಾಸು ಸುರಕ್ಷತೆ ಒದಗಿಸಲಿದೆ’ ಎಂದು ಅವರು ಹೇಳಿದ್ದಾರೆ.

‘ಗರಿಷ್ಠ ವಿಮೆ ಮೊತ್ತ ₹ 50 ಲಕ್ಷದವರೆಗೆ ಇರಲಿದೆ. ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿ ವಿಮೆ ಇಳಿಸಿದ ಮೊತ್ತದ ಶೇ 25ರಷ್ಟನ್ನು ನೀಡಲಾಗುವುದು. ಕಾಯಿಲೆ ಗಂಭೀರ ಸ್ವರೂಪದಲ್ಲಿ ಇದ್ದಾಗ ಶೇ 100ರಷ್ಟು ಹಣ ಪಾವತಿಸಲಾಗುವುದು ಮತ್ತು ಭವಿಷ್ಯದ ಕಂತುಗಳನ್ನು ಮನ್ನಾ ಮಾಡಲಾಗುವುದು. ಪಾಲಿಸಿದಾರರು ಗುಣಮುಖರಾಗದೆ ಮೃತಪಟ್ಟ ಸಂದರ್ಭದಲ್ಲಿ ಮೂಲ ವಿಮೆ ಮೊತ್ತದ ಶೇ 1ರಷ್ಟನ್ನು ಪಾಲಿಸಿಯಲ್ಲಿ ಸೂಚಿಸಿದ್ದ ವ್ಯಕ್ತಿಗೆ 10 ವರ್ಷಗಳ ಕಾಲ ವಿತರಿಸಲಾಗುವುದು. ಇದು ಈ ಯೋಜನೆಯ ಇನ್ನೊಂದು ಆಕರ್ಷಕ ಸೌಲಭ್ಯವಾಗಿದೆ’ ಎಂದು ಅವರು ವಿವರಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !