ಫಾಸ್ಟ್ಯಾಗ್‌ ಜತೆ ಇ–ವೇ ಬಿಲ್‌ ಜೋಡಣೆ

7
ಜಿಎಸ್‌ಟಿ ವಂಚನೆ ಪ್ರವೃತ್ತಿಗೆ ತಡೆ ಹಾಕಲು ಕ್ರಮ

ಫಾಸ್ಟ್ಯಾಗ್‌ ಜತೆ ಇ–ವೇ ಬಿಲ್‌ ಜೋಡಣೆ

Published:
Updated:

ನವದೆಹಲಿ: ಸರಕು ಸಾಗಣೆ ವಾಹನಗಳ ತ್ವರಿತ ಸಂಚಾರಕ್ಕೆ ಅನುವು ಮಾಡಿಕೊಡಲು ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು, ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಕೇಂದ್ರಗಳಲ್ಲಿನ ಫಾಸ್ಟ್ಯಾಗ್‌ ಜತೆ ಇ–ವೇ ಬಿಲ್‌ ಜೋಡಿಸಲು ರೆವಿನ್ಯೂ ಇಲಾಖೆ ಉದ್ದೇಶಿಸಿದೆ.

 ಈ ಪ್ರಸ್ತಾವ ಜಾರಿಗೆ ಬಂದರೆ, ದೇಶದಾದ್ಯಂತ ಸರಕು ಸಾಗಣೆ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬರಲಿದೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಸರಕು ಸಾಗಣೆ ವಾಹನಗಳ ಜಾಡು ಗುರುತಿಸುವ ಮತ್ತು ಪತ್ತೆ ಹಚ್ಚುವ ಮಾಹಿತಿ ಹಂಚಿಕೊಳ್ಳುವ ಸದ್ಯದ ವ್ಯವಸ್ಥೆಯು ಸುಲಭವಾಗಿ ವಹಿವಾಟು ನಿರ್ವಹಿಸಲು ಅಡಚಣೆ ಒದಗಿಸುತ್ತಿದೆ. ಉದ್ದಿಮೆ ಸಂಸ್ಥೆಗಳ ಸಾಗಣೆ ವೆಚ್ಚವನ್ನೂ ಹೆಚ್ಚಿಸುತ್ತದೆ. ರೆವಿನ್ಯೂ ಇಲಾಖೆ ಜಾರಿಗೆ ತರಲು ಉದ್ದೇಶಿಸಿರುವ ಈ ಹೊಸ ಪ್ರಸ್ತಾವ ಜಾರಿಗೆ ಬಂದರೆ, ಸರಕು ಪೂರೈಕೆಯಲ್ಲಿನ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಂಡು ಜಿಎಸ್‌ಟಿ ತಪ್ಪಿಸುವ ಪ್ರವೃತ್ತಿಗೆ ತಡೆ ಒಡ್ಡಲಿದೆ.

ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ವಿಧಿಸುವ ಉದ್ದೇಶದ ಇ–ವೇ ಬಿಲ್‌ ಈಗಾಗಲೇ ಜಾರಿಗೆ ಬಂದಿದೆ. ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕು ಸಾಗಿಸುವವರು ಕಡ್ಡಾಯವಾಗಿ ಇ–ವೇ ಬಿಲ್‌ ಪಡೆದುಕೊಳ್ಳಬೇಕು.

ಇ–ವೇ ಬಿಲ್‌ಗೆ ಫಾಸ್ಟ್ಯಾಗ್‌ ತಳಕು ಹಾಕುವುದರಿಂದ ರೆವಿನ್ಯೂ ಅಧಿಕಾರಿಗಳು ವಾಹನಗಳ ಮೇಲೆ ನಿಗಾ ಇರಿಸಬಹುದು. ಇ–ವೇಲ್‌ ಪಡೆಯುವಾಗ ಸೂಚಿಸಿದ ಸ್ಥಳಕ್ಕೆ ವಾಹನ ಸಂಚರಿಸಿರುವುದನ್ನೂ ದೃಢೀಕರಿಸಿಕೊಳ್ಳಬಹುದು. ಸರಕು ಹೊತ್ತ ವಾಹನವು ಪ್ರತಿಯೊಂದು ಟೋಲ್‌ ಪ್ಲಾಜಾ ಮೂಲಕ ಹಾದು ಹೋಗುತ್ತಿದ್ದಂತೆ ಸರಕು ಪೂರೈಕೆದಾರರೂ ಎಸ್‌ಎಂಎಸ್‌ ಮೂಲಕ ಅದರ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ದೆಹಲಿ – ಮುಂಬೈ ಕೈಗಾರಿಕಾ ಕಾರಿಡಾರ್‌ನ ಸರಕು ಸಾಗಣೆ ವಾಹನಗಳ ಮೇಲೆ ನಿಗಾ ಇರಿಸುವ ದತ್ತಾಂಶ ಬ್ಯಾಂಕ್‌ (ಎಲ್‌ಡಿಬಿ) ಸೇವೆ ಜತೆಗೂ ಇ–ಬಿಲ್‌ ತಳಕು ಹಾಕುವುದರಿಂದಲೂ ಸರಕು ಸಾಗಣೆ ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬರಲಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !