ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ–ಐಸಿಐಸಿಐ ಬ್ಯಾಂಕ್‌ ಒಪ್ಪಂದ

Last Updated 26 ಮೇ 2020, 16:19 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಹಕರಿಗೆ ಸುಲಭವಾಗಿ ಹಣಕಾಸು ನೆರವು ಲಭ್ಯವಾಗುವಂತೆ ಮಾಡಲು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಐಸಿಐಸಿಐ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಕೋವಿಡ್‌ ಬಿಕ್ಕಟ್ಟಿನಿಂದ ಸಮಸ್ಯೆಗೆ ಒಳಗಾಗಿರುವ ಗ್ರಾಹಕರ ಅನುಕೂಲಕ್ಕೆ ತಕ್ಕುದಾದ ಇಎಂಐ ಆಯ್ಕೆಗಳನ್ನು ಬ್ಯಾಂಕ್‌ ನೀಡಲಿದೆ. ₹ 1 ಲಕ್ಷ ಮೊತ್ತದ ಸಾಲಕ್ಕೆ ಮೂರು ತಿಂಗಳವರೆಗೆ ₹ 899 ಇಎಂಐ ಕೊಡುಗೆ ನೀಡಲಿದೆ.

ಬ್ಯಾಂಕ್‌ ಜತೆಗಿನ ಈ ಒಪ್ಪಂದದಿಂದ ನಮ್ಮ ಗ್ರಾಹಕರಿಗೆ ಅತ್ಯಂತ ಆಕರ್ಷಕ ಮತ್ತು ಸುಲಭವಾದ ಸಾಲ ಸೌಲಭ್ಯಗಳು ಸಿಗುವ ವಿಶ್ವಾಸವಿದೆ ಎಂದು ಮಾರುತಿ ಸುಜುಕಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

ಹುಂಡೈ 806 ಮಳಿಗೆ ಆರಂಭ

ನವದೆಹಲಿ: ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ದೇಶದಾದ್ಯಂತ 806 ಮಳಿಗೆಗಳನ್ನು ಪುನರಾರಂಭಿಸಿದೆ.

863 ಡೀಲರ್‌ಶಿಪ್‌ ಕೇಂದ್ರಗಳೂ ಕಾರ್ಯಾರಂಭ ಮಾಡಿವೆ ಎಂದೂ ಹೇಳಿದೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುಮತಿ ಪಡೆದುಕೊಳ್ಳಲಾಗಿದೆ. ಕ್ರೆಟಾ ಮತ್ತು ಈಚೆಗೆ ಬಿಡುಗಡೆ ಮಾಡಿರುವ ವರ್ನಾಗೆ ಉತ್ತಮ ಸ್ಪಂದನೆ ಬರುತ್ತಿದೆ’ ಎಂದು ಕಂಪನಿ ನಿರ್ದೇಶಕ ತರುಣ್‌ ಗರ್ಗ್‌ ಹೇಳಿದ್ದಾರೆ.

9 ಸಾವಿರ ಕಾರುಗಳಿಗೆ ಬುಕಿಂಗ್‌ ಆಗಿದ್ದು, 22 ದಿನಗಳಲ್ಲಿ 5,600 ಕಾರುಗಳನ್ನು ಗ್ರಾಹಕರಿಗೆ ತಲುಪಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಜೂಮ್‌ಕಾರ್‌ ಸೇವೆ ಆರಂಭ

ಮುಂಬೈ:ಬಾಡಿಗೆಗೆ ಕಾರ್ ನೀಡುವ ಜೂಮ್‌ ಕಾರ್ ಕಂಪನಿಯು ದೇಶದಾದ್ಯಂತ 35 ನಗರಗಳಲ್ಲಿ ತನ್ನ ಸೇವೆ ಪುನರಾರಂಭಿಸಿದೆ.

ಗ್ರಾಹಕರಿಗೆ ವೈಯಕ್ತಿಕ ಪ್ರಯಾಣದ ಆಯ್ಕೆ ನೀಡುವ ಸಲುವಾಗಿ ಜೂಮ್‌ ಆತ್ಮನಿರ್ಭರ ಮಾರಾಟಕ್ಕೂ ಚಾಲನೆ ನೀಡಲಾಗಿದೆ ಎಂದು ತಿಳಿಸಿದೆ.

ಬೆಂಗಳೂರು, ಮಂಗಳೂರು, ಹೈದರಾಬಾದ್, ಚೆನ್ನೈ ಒಳಗೊಂಡು ಪ್ರಮುಖ ನಗರಗಳಲ್ಲಿ ಸೇವೆ ಆರಂಭವಾಗಿದೆ. ಮೈಸೂರಿನಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 7ರವರೆಗೆ ಮಾತ್ರವೇ ಕಾರುಗಳು ಲಭ್ಯವಿರಲಿವೆ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT