ಭಾನುವಾರ, ಜುಲೈ 25, 2021
27 °C

ಲಾಕ್‌ಡೌನ್ ಪರಿಣಾಮ | ಆಹಾರ ಹಣದುಬ್ಬರ ಶೇ 9.28ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಾಕ್‌ಡೌನ್‌ ಇರುವುದರಿಂದ ಕೇಂದ್ರ ಸರ್ಕಾರವು ಚಿಲ್ಲರೆ ಹಣದುಬ್ಬರಕ್ಕೆ ಸಂಬಂಧಿಸಿದ ಕೆಲವು ಅಂಕಿ–ಅಂಶಗಳನ್ನು ಮಾತ್ರವೇ ಬಿಡುಗಡೆ ಮಾಡಿದ್ದು, ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇ 9.28ಕ್ಕೆ ಏರಿಕೆಯಾಗಿದೆ.

2019ರ ಮೇನಲ್ಲಿ ಆಹಾರ ಹಣದುಬ್ಬರ ಶೇ 1.83ರಷ್ಟಿತ್ತು.

ಗ್ರಾಹಕ ಆಹಾರ ದರ ಸೂಚ್ಯಂಕ (ಸಿಎಫ್‌ಪಿಐ) ಮೇ ತಿಂಗಳಿಗೆ ಗ್ರಾಮೀಣ ಭಾಗದಲ್ಲಿ ಶೇ 9.59, ನಗರ ಪ್ರದೇಶದಲ್ಲಿ ಶೇ 8.36 ಹಾಗೂ ಒಟ್ಟಾರೆ ಶೇ 9.28ರಷ್ಟಾಗಿದೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ಲಾಕ್‌ಡೌನ್‌ನಿಂದಾಗಿ ಕೇಂದ್ರ ಸರ್ಕಾರವು ಸತತ ಎರಡನೇ ತಿಂಗಳಿನಲ್ಲಿಯೂ ಚಿಲ್ಲರೆ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದಲ್ಲಿ ಅಂಕಿ–ಅಂಶ ಬಿಡುಗಡೆ ಮಾಡಿಲ್ಲ. 

ಐಐಪಿ ಅಂಕಿ–ಅಂಶ ಇಲ್ಲ: ಕೈಗಾರಿಕೆಗಳ ಬೆಳವಣಿಗೆಯನ್ನು ಸೂಚಿಸುವ ಏಪ್ರಿಲ್‌ ತಿಂಗಳ ಕೈಗಾರಿಕಾ  ಉತ್ಪಾದನೆ ಸೂಚ್ಯಂಕ (ಐಐಪಿ) ಅಂಕಿ–ಅಂಶವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. 

ಕೋವಿಡ್‌–19 ನಿಯಂತ್ರಿಸಲು ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ 2020ರ ಮಾರ್ಚ್‌ನಿಂದ ಬಹುತೇಕ ಕೈಗಾರಿಕಾ ವಲಯಗಳು ಕಾರ್ಯಾಚರಣೆ ನಡೆಸಿಲ್ಲ. ಹೀಗಾಗಿ ಅಂಕಿ–ಅಂಶ ನೀಡಲು ಸಾಧ್ಯವಾಗಿಲ್ಲ  ಎಂದು ತಿಳಿಸಿದೆ.

ಅಂದಾಜಿನ ಪ್ರಕಾರ ಏಪ್ರಿಲ್‌ನ ಐಐಪಿ 56.3ರಷ್ಟಾಗಿದೆ. 2019ರಲ್ಲಿ 126 ಇತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹೋಲಿಕೆ ಮಾಡಿ ನೋಡಲು ಆಗುವುದಿಲ್ಲ ಎಂದೂ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು