ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ವಸತಿ ಮಾರಾಟ ಶೇ 81ರಷ್ಟು ಕುಸಿತ ಸಾಧ್ಯತೆ

Last Updated 25 ಜೂನ್ 2020, 15:46 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌–ಜೂನ್‌ ಅವಧಿಯಲ್ಲಿ ವಸತಿ ಮಾರಾಟ ಶೇ 81ರಷ್ಟು ಕುಸಿತ ಕಾಣಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಆನಾರ್ಕ್‌ ಹೇಳಿದೆ.

ಹೊಸ ಯೋಜನೆಗಳ ಆರಂಭವು ಶೇ 98ರಷ್ಟು ಕುಸಿತ ಕಾಣಲಿದ್ದು, 1,390 ಯೋಜನೆಗಳಷ್ಟೆ ಕಾರ್ಯಾರಂಭ ಮಾಡಲಿವೆ. ಕಳೆದ ವರ್ಷ 69 ಸಾವಿರ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದು ತಿಳಿಸಿದೆ.

ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ, ಮುಂಬೈ ಮಹಾನಗರ ಪ್ರದೇಶ, ದೆಹಲಿ ಮಹಾನಗರ ಪ್ರದೇಶ ಮತ್ತು ಕೋಲ್ಕತ್ತ ನಗರಗಳ ಮಾಹಿತಿ ನೀಡಿದೆ.

‘ತಂತ್ರಜ್ಞಾನ ಅಳವಡಿಕೆಯು ವಸತಿ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಲವು ಡೆವಲಪರ್‌ಗಳು ತಮ್ಮ ಡಿಜಿಟಲ್‌ ಮಾರಾಟ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ’ ಎಂದು ಆನಾರ್ಕ್‌ನ ಅಧ್ಯಕ್ಷ ಅನುಜ್‌ ಪುರಿ ತಿಳಿಸಿದ್ದಾರೆ.

ಮಾರಾಟದ ವಿವರ

2020 ಏಪ್ರಿಲ್‌–ಜೂನ್‌;12,740

2019 ಏಪ್ರಿಲ್‌–ಜೂನ್;68,800

ನಗರವಾರು ವಿವರ

ದೆಹಲಿ ಎನ್‌ಸಿಆರ್;83%

ಎಂಎಂಆರ್‌;83%

ಬೆಂಗಳೂರು;77%

ಪುಣೆ;79%

ಹೈದರಾಬಾದ್;85%

ಚೆನ್ನೈ;84%

ಕೋಲ್ಕತ್ತ;79%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT