ಮಂಗಳವಾರ, ಆಗಸ್ಟ್ 4, 2020
22 °C

ಲಾಕ್‌ಡೌನ್‌ ಪರಿಣಾಮ: ಮದ್ಯ, ಸಿಗರೇಟ್‌ ಮಾರಾಟ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ಅವಧಿಯಲ್ಲಿ ಮದ್ಯ, ಸಿಗರೇಟ್‌, ಐಸ್‌ಕ್ರೀಂ, ಸೌಂದರ್ಯವರ್ಧಕ ಮತ್ತು ಶೃಂಗಾರ ಸಾಧನಗಳ ಮಾರಾಟ ದಿಢೀರ್‌ ಕುಸಿದಿದೆ.

ಇದರಿಂದಾಗಿ ಏಪ್ರಿಲ್‌‌–ಜೂನ್ ತ್ರೈಮಾಸಿಕ ಅವಧಿಯಲ್ಲಿ ‘ಅತಿವೇಗವಾಗಿ ಮಾರಾಟವಾಗುವ ಗ್ರಾಹಕ ಸಾಮಗ್ರಿ (ಎಫ್‌ಎಂಜಿಸಿ)’ ವಲಯದ ಉದ್ಯಮಗಳ ಆದಾಯವೂ ಗಣನೀಯವಾಗಿ ಕುಸಿದಿದೆ. ಲಾಕ್‌ಡೌನ್ ಜಾರಿಗೊಳಿಸಿದ ಮಾರ್ಚ್ ಮತ್ತು ಏಪ್ರಿಲ್‌ ಈ ಎರಡು ತಿಂಗಳಲ್ಲಿ ಎಫ್‌ಎಂಜಿಸಿ ವಲಯ ಭಾರಿ ನಷ್ಟ ಅನುಭವಿಸಿದೆ ಎಂದು ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ ಎಡೆಲ್ವೆಸ್ ಸೆಕ್ಯೂರಿಟೀಸ್‌ ವರದಿ ಹೇಳಿದೆ. 

ಕೊರೊನಾ ಲಾಕ್‌ಡೌನ್‌ನಿಂದ ಪ್ಯಾಕೆಟ್ ಆಹಾರ ಉತ್ಪನ್ನ ಮತ್ತು ಆರೋಗ್ಯ ಹಾಗೂ ನೈರ್ಮಲ್ಯ ಉತ್ಪನ್ನಗಳಿಗೆ ಭಾರಿ ಬೇಡಿಕೆ ಕುದುರಿದ್ದು, ಅದು ಜೂನ್ ನಂತರವೂ ಮುಂದುವರೆಯುವ ಸಾಧ್ಯತೆಗಳಿವೆ ಎಂದು ವರದಿ ಹೇಳಿದೆ. ಬಿಸ್ಕಿಟ್‌, ನೂಡಲ್‌, ಹೆಲ್ತ್‌ & ನ್ಯೂಟ್ರಿಷನ್, ಅಗತ್ಯ ಆಹಾರ ಸಾಮಗ್ರಿ, ಪ್ಯಾಕೆಟ್ ಫುಡ್‌, ಗೃಹ ಕೀಟನಾಶಕ, ಬ್ಯಾಕ್ಟೀರಿಯಾ ನಿರೋಧಕ ಸೋಪ್‌, ಸ್ಯಾನಿಟೈಸರ್‌ನಂತಹ ಆರೋಗ್ಯ ಮತ್ತು ನೈರ್ಮಲ್ಯ ಉತ್ಪನ್ನಗಗಳು ಈ‌ ತ್ರೈಮಾಸಿಕದಲ್ಲಿ ಉತ್ತಮ ಚೇತರಿಕೆ ಕಂಡಿವೆ.

ಮುನ್ನೋಟ ಪರಿಷ್ಕರಣೆ

ಮದ್ಯ, ಸಿಗರೇಟ್‌ ಮತ್ತು ಸೌಂದರ್ಯವರ್ಧಕಗಳ ಮಾರಾಟ ತೀವ್ರ ಕುಸಿತ ಕಂಡ ಕಾರಣ 2020ರಲ್ಲಿ ದೇಶದ ಎಫ್ಎಂಜಿಸಿ ವಲಯದ ಪ್ರಗತಿ ಶೇ 5–ಶೇ 6ರಷ್ಟಕ್ಕೆ ಕಡಿತಗೊಳಿಸಿದೆ.ಜನವರಿಯಿಂದ ಡಿಸೆಂಬರ್‌ ಅವಧಿಯಲ್ಲಿ ಎಫ್‌ಎಂಜಿಸಿ ವಲಯದ ಪ್ರಗತಿ ಶೇ9–ಶೆ10ರಷ್ಟು ಇರಲಿದೆ ಎಂದು ಮುನ್ನೋಟ ವರದಿಯಲ್ಲಿ ನೆಲ್ಸನ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಅಂದಾಜಿಸಿತ್ತು.

ಲಾಕ್‌ಡೌನ್‌ ಅವಧಿಯಲ್ಲಿ ಜನರು ಮನೆಯಲ್ಲಿಯೇ ಅಡುಗೆ ಮಾಡಲು ಶುರು ಮಾಡಿದ ಕಾರಣ ಅಡುಗೆ ಎಣ್ಣೆ, ಓಟ್ಸ್, ನೂಡಲ್ಸ್‌, ಪಾಸ್ತಾ, ರೆಡಿ ಟು ಈಟ್‌ ಉತ್ಪನ್ನಗಳ‌ ಬೇಡಿಕೆ ನಿರೀಕ್ಷೆ ಮೀರಿ ಹೆಚ್ಚಿದೆ. ಮೂರ್ನಾಲ್ಕು ತಿಂಗಳಿಂದ ಮನೆಯಲ್ಲೇ ಕಾಲ ಕಳೆಯುತ್ತಿರುವ ಜನರು ಸೌಂದರ್ಯದ ಬಗ್ಗೆ ಗಮನ ಹರಿಸದ ಕಾರಣ ಸಹಜವಾಗಿ ಸೌಂದರ್ಯ ಸಾಧನಗಳ ಬಳಕೆ ಕುಸಿದಿದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು