ಶುಕ್ರವಾರ, ಜೂಲೈ 3, 2020
22 °C

ಏಪ್ರಿಲ್‌ನಲ್ಲಿ ವಾಹನಗಳ ಶೂನ್ಯ ಮಾರಾಟ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಾಹನ ತಯಾರಿಕೆಯ ಪ್ರಮುಖ ಕಂಪನಿಗಳ ಏಪ್ರಿಲ್‌ ತಿಂಗಳ ದೇಶಿ ಮಾರಾಟವು ಶೂನ್ಯವಾಗಿದೆ.

ದೇಶದಾದ್ಯಂತ ಜಾರಿಯಲ್ಲಿದ್ದ ದಿಗ್ಬಂಧನದ ಕಾರಣಕ್ಕೆ, ಮಾರುತಿ, ಹುಂಡೈ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಎಂಜಿ ಮೋಟರ್‌ ಮತ್ತಿತರ ಕಂಪನಿಗಳಿಂದ ಒಂದೇ ಒಂದು ವಾಹನ್‌ ಮಾರಾಟ ಮಾಡಲು ಸಾಧ್ಯವಾಗಿಲ್ಲ. ದಿಗ್ಬಂಧನದ ಕಾರಣಕ್ಕೆ ದೇಶಿ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟವು ಸಂಪೂರ್ಣವಾಗಿ ಬಾಧಿತವಾಗಿದೆ.

ಕಾರ್‌ ತಯಾರಿಕೆಯಲ್ಲಿ ದೇಶದ ಅತಿದೊಡ್ಡ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾದ (ಎಂಎಸ್‌ಐ) ಒಂದು ಕಾರು ಕೂಡ ಮಾರಾಟವಾಗಿಲ್ಲ. ಕಂಪನಿಯ ತಯಾರಿಕಾ ಘಟಕಗಳನ್ನೆಲ್ಲ ಮುಚ್ಚಲಾಗಿದೆ.

ಬಂದರಿನಿಂದ ರಫ್ತು: ಬಂದರುಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಿದ್ದರಿಂದ ಮುಂದ್ರಾ ಬಂದರಿನಿಂದ  632 ವಾಹನಗಳನ್ನು ರಫ್ತು ಮಾಡಲಾಗಿದೆ. ಸುರಕ್ಷತೆಯ ಎಲ್ಲ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ವಾಹನಗಳನ್ನು ರಫ್ತು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಹುಂಡೈ ಮೋಟರ್‌ ಇಂಡಿಯಾದ ದೇಶಿ ಮಾರಾಟ ಸಾಧನೆಯೂ ಶೂನ್ಯವಾಗಿದೆ. ಆದರೆ, 1,341 ವಾಹನಗಳನ್ನು ರಫ್ತು ಮಾಡಿದೆ.

ಲಾಕ್‌ಡೌನ್‌ ಹೊರತಾಗಿಯೂ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಹಿಂದಿನ ತಿಂಗಳು 733 ವಾಹನಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ‘ದಿಗ್ಬಂಧನ ತೆರವಾಗುತ್ತಿದ್ದಂತೆ ನಮ್ಮ ಡೀಲರ್‌ಗಳು ಕಾರ್ಯಾರಂಭ ಮಾಡಲಿದ್ದಾರೆ. ಆರಂಭದ ಕೆಲ ವಾರಗಳವರೆಗಿನ ಬೇಡಿಕೆ ಪೂರೈಸುವಷ್ಟು ದಾಸ್ತಾನು  ಇದೆ’ ಎಂದು ಕಂಪನಿಯ ಆಟೊಮೋಟಿವ್‌ ವಿಭಾಗದ ಸಿಇಒ ವಿಜಯ್‌ ನಕ್ರಾ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು