ನವದೆಹಲಿ: ಅಡುಗೆ ಅನಿಲ ಸಿಲಿಂಡರ್ನ (ಎಲ್ಪಿಜಿ) ಅಕ್ರಮ ದಾಸ್ತಾನು ತಡೆಯುವ ಹಾಗೂ ಎಲ್ಪಿಜಿ ಸಿಲಿಂಡರ್ಗಳ ಲಭ್ಯತೆಯು ನ್ಯಾಯಸಮ್ಮತವಾಗಿ ಇರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರವು ನಿಯಮಗಳಲ್ಲಿ ತುಸು ಬದಲಾವಣೆ ತಂದಿದೆ.

ಒಬ್ಬ ಗ್ರಾಹಕರು ಒಂದು ಬಾರಿ ಎಲ್ಪಿಜಿ ಖರೀದಿ ಮಾಡಿದ ನಂತರ, ಇನ್ನೊಂದು ಎಲ್ಪಿಜಿ ಸಿಲಿಂಡರ್ ಖರೀದಿ ಮಾಡಲು 25 ದಿನ ಕಾಯಬೇಕು ಎಂಬ ನಿಯಮ ಜಾರಿಗೆ ಬಂದಿದೆ ಎಂದು ಮೂಲಗಳು ಹೇಳಿವೆ.

ಈ ಮೊದಲು, ಒಂದು ಸಿಲಿಂಡರ್ ಖರೀದಿಸಿದ 21 ದಿನಗಳ ನಂತರ ಮತ್ತೊಂದು ಎಲ್ಪಿಜಿ ಸಿಲಿಂಡರ್ ಪಡೆಯಲು ಅವಕಾಶ ಇತ್ತು.

ದೇಶದಲ್ಲಿ ಕುಟುಂಬವೊಂದು ವರ್ಷಕ್ಕೆ ಸರಾಸರಿ ಎಂಟು ಸಿಲಿಂಡರ್ ಎಲ್ಪಿಜಿ ಬಳಸುತ್ತಿದೆ. ಒಂದು ಸಿಲಿಂಡರ್ ಸಾಮಾನ್ಯವಾಗಿ ಆರು ವಾರಗಳಿಗೆ ಸಾಕಾಗುತ್ತದೆ. ಎಲ್ಪಿಜಿ ಸಿಲಿಂಡರ್ ದಾಸ್ತಾನು ಅಗತ್ಯ ಪ್ರಮಾಣದಲ್ಲಿ ಇದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

‘ದೇಶದ ಪ್ರತಿಯೊಂದು ಪೆಟ್ರೋಲ್ ಬಂಕ್ ಕೂಡ ಕಾರ್ಯಾಚರಣೆ ಮಾಡುತ್ತಿದೆ, ಮನೆಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ ಪೂರೈಕೆ ಎಲ್ಲಿಯೂ ಸ್ಥಗಿತಗೊಂಡಿಲ್ಲ, ಸಿಎನ್ಜಿ ಕೇಂದ್ರಗಳೆಲ್ಲವೂ ಕಾರ್ಯ ನಿರ್ವಹಿಸುತ್ತಿವೆ. ಭೀತಿಗೆ ಒಳಗಾಗುವ ಅಗತ್ಯ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಚ್ಚಾ ತೈಲದ ಬೆಲೆಯು ಬ್ಯಾರೆಲ್ ಒಂದಕ್ಕೆ 100 ಡಾಲರ್ ದಾಟಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

ಸರ್ಕಾರವು ಕಚ್ಚಾ ತೈಲ ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ಮುಂದಿನ ಗರಿಷ್ಠ ಎಂಟು ವಾರಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಹಾಗೂ ಸಂಸ್ಕರಿತ ತೈಲೋತ್ಪನ್ನಗಳು ಇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.