ಭಾನುವಾರ, ಏಪ್ರಿಲ್ 11, 2021
29 °C

ಎಲ್‌ಪಿಜಿ ಸಿಲಿಂಡರ್‌ ಬೆಲೆ ₹ 25 ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್‌ ದರ ಸೋಮವಾರ ₹ 25ರಷ್ಟು ಏರಿಕೆಯಾಗಿದೆ. 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ ದರ ಬೆಂಗಳೂರಿನಲ್ಲಿ ಈಗ ₹ 822ಕ್ಕೆ ತಲುಪಿದೆ.

ಫೆಬ್ರುವರಿಯಲ್ಲಿ ಮೂರು ಬಾರಿ ದರ ಏರಿಕೆ ಮಾಡಿದ್ದರಿಂದ ಎಲ್‌ಪಿಜಿ ಬೆಲೆ ಒಟ್ಟು ₹ 100ರಷ್ಟು ಏರಿಕೆ ಆಗಿತ್ತು. ಇದೀಗ ಸೋಮವಾರದ ದರ ಹೆಚ್ಚಳವನ್ನೂ ಸೇರಿಸಿದರೆ 14.2 ಕೆ.ಜಿ ತೂಕದ ಒಂದು ಸಿಲಿಂಡರ್‌ ಬೆಲೆ ₹ 125ರಷ್ಟು ಏರಿಕೆಯಾಗಿದೆ.

ದೇಶದೆಲ್ಲೆಡೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮಹಾನಗರಗಳು ಹಾಗೂ ಪ್ರಮುಖ ನಗರಗಳ ಗ್ರಾಹಕರಿಗೆ ಸಬ್ಸಿಡಿ ಸಿಗುತ್ತಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು