ಅಡುಗೆ ಅನಿಲ ಸಿಲಿಂಡರ್‌ ದರ ಹೆಚ್ಚಳ

4

ಅಡುಗೆ ಅನಿಲ ಸಿಲಿಂಡರ್‌ ದರ ಹೆಚ್ಚಳ

Published:
Updated:

ನವದೆಹಲಿ : ಸಬ್ಸಿಡಿಯಡಿ ವಿತರಿಸುವ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರುಗಳ ಬೆಲೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ₹ 1.49ರಂತೆ ಹೆಚ್ಚಿಸಲಾಗಿದೆ.

ಮೂಲ ಬೆಲೆ ಮೇಲಿನ ತೆರಿಗೆ ಹೊರೆಯ ಕಾರಣಕ್ಕೆ ಬೆಲೆ ಏರಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ತಿಳಿಸಿದೆ. ಇದು ದೇಶದ ಅತಿದೊಡ್ಡ ಇಂಧನ ಮಾರಾಟ ಸಂಸ್ಥೆಯಾಗಿದೆ. ಇದರಿಂದ ದೆಹಲಿಯಲ್ಲಿ ಪ್ರತಿ ಸಿಲಿಂಡರ್‌ ಬೆಲೆ ₹ 499.51ಕ್ಕೆ ತಲುಪಿದೆ. ಎಲ್‌ಪಿಜಿ ಗ್ರಾಹಕರು ಮಾರುಕಟ್ಟೆ ದರದಲ್ಲಿಯೇ ಖರೀದಿಸಬೇಕು. ಸಬ್ಸಿಡಿ ಮೊತ್ತವನ್ನು ಗ್ರಾಹಕರ ಬ್ಯಾಂಕ್‌ ಖಾತೆಗೆ ನೇರವಾಗಿ ಪಾವತಿಸಲಾಗುತ್ತಿದೆ.

ಡೀಸೆಲ್‌ ಏರಿಕೆ: ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ 28 ಪೈಸೆ ಹೆಚ್ಚಿಸಲಾಗಿದೆ. ಇದರಿಂದ ದೆಹಲಿಯಲ್ಲಿ ಪ್ರತಿ ಲೀಟರ್‌ ಡೀಸೆಲ್‌ ಬೆಲೆ ಇದೇ ಮೊದಲ ಬಾರಿಗೆ ₹ 70.21ಕ್ಕೆ ಏರಿಕೆಯಾಗಿದೆ.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !