ನವದೆಹಲಿ: ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಯುದ್ಧದ ಹಿನ್ನೆಲೆ ಯಲ್ಲಿ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ದೇಶದೆಲ್ಲೆಡೆ ಇದರ ಪರಿಣಾಮ ಬೀರಿದೆ. ರಾಜ್ಯದಲ್ಲಿ ಎಲ್ಪಿಜಿ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದರಿಂದ ರಾಜಧಾನಿ ಬೆಂಗಳೂರಿನಲ್ಲಿ ಹೋಟೆಲ್ಗಳು ಬಾಗಿಲು ಮುಚ್ಚಿವೆ.

ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಲ್ಪಿಜಿ ಸರಬರಾಜನ್ನು ಸುಗಮಗೊಳಿಸಲು ಮೂವರು ಕಾರ್ಯಕಾರಿ ನಿರ್ದೇಶಕರ ಸಮಿತಿ ರಚನೆ ಮಾಡಲಾಗಿದೆ ಎಂದು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

‘ಸದ್ಯದ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಸಂದರ್ಭದಲ್ಲಿ ಇಂಧನ ಮತ್ತು ಎಲ್ಪಿಜಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕ ಎಲ್ಪಿಜಿ ಉತ್ಪಾದನೆ ಮಾಡುವಂತೆ ಸಚಿವಾಲಯ ಆದೇಶಿಸಿದೆ. ಹೆಚ್ಚುವರಿ ಉತ್ಪಾದನೆಯ ಎಲ್ಪಿಜಿಯನ್ನು ಗೃಹಬಳಕೆಗೆ ಬಳಸಬಹುದು’ ಎಂದು ಪುರಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

'ಗೃಹ ಬಳಕೆಯ ಎಲ್ಪಿಜಿ ಪೂರೈಕೆಗೆ ಸಚಿವಾಲಯ ಆದ್ಯತೆ ನೀಡಿದೆ. ಸಂಗ್ರಹಣೆ, ಕಾಳಸಂತೆಯಲ್ಲಿ ಮಾರಾಟ ತಪ್ಪಿಸಲು 25 ದಿನಗಳ ಇಂಟರ್ ಬುಕಿಂಗ್ ಅವಧಿಯನ್ನು ಪರಿಚಯಿಸಿದೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ವಲಯಗಳಿಗೂ ಎಲ್ಪಿಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ’ಎಂದು ಅವರು ಹೇಳಿದ್ದಾರೆ.

‘ಗೃಹ ಬಳಕೆ ಅಲ್ಲದ ವಲಯಗಳಿಗೆ ಎಲ್ಪಿಜಿ ಪೂರೈಕೆ ಸುಗಮಗೊಳಿಸಲೂ ಯತ್ನಿಸಲಾಗುತ್ತಿದೆ. ರೆಸ್ಟೋರೆಂಟ್, ಹೋಟೆಲ್ಗಳು ಮತ್ತು ಕೈಗಾರಿಕೆಗಳಿಗೆ ಎಲ್ಪಿಜಿ ಪೂರೈಕೆಗಾಗಿ ಪರಿಸ್ಥಿತಿ ನಿರ್ವಹಿಸಲು ಮೂವರು ಕಾರ್ಯಕಾರಿ ನಿರ್ದೇಶಕರ ಸಮಿತಿ ರಚಿಸಲಾಗಿದೆ" ಎಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.