ಸೋಮವಾರ, ಸೆಪ್ಟೆಂಬರ್ 16, 2019
21 °C

₹ 113 ಕೋಟಿ ಮೌಲ್ಯದಮೈಂಡ್‌ಟ್ರೀ ‌ಷೇರುಎಲ್‌ಆ್ಯಂಡ್‌ಟಿ ವಶಕ್ಕೆ

Published:
Updated:

ನವದೆಹಲಿ: ಪ್ರಮುಖ ಮೂಲ ಸೌಕರ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ), ಮುಕ್ತ ಮಾರುಕಟ್ಟೆಯ ಮೂಲಕ ಮೈಂಡ್‌ಟ್ರೀ ಷೇರುಗಳನ್ನು ₹ 113 ಕೋಟಿಗೆ ಖರೀದಿಸಿದೆ.

11.52 ಲಕ್ಷ ಷೇರುಗಳನ್ನು (ಶೇ 0.75) ಪ್ರತಿ ಷೇರಿಗೆ ₹ 979.94 ರಂತೆ ಖರೀದಿ ಮಾಡಿದೆ ಎಂದು ರಾಷ್ಟ್ರೀಯ ಷೇರುಪೇಟೆಯಲ್ಲಿ ಮಾಹಿತಿ ಇದೆ. ಈ ಬಗ್ಗೆ ಮೈಂಡ್‌ಟ್ರೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಎಲ್‌ಆ್ಯಂಡ್‌ಟಿ ಕಳೆದ ವಾರವಷ್ಟೇ ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥ ಮತ್ತು ಕಾಫಿ ಡೇ, ಮೈಂಡ್‌ಟ್ರೀನಲ್ಲಿ ಹೊಂದಿದ್ದ ಶೇ 20ರಷ್ಟು ಷೇರುಗಳನ್ನು ₹ 3,210 ಕೋಟಿಗೆ ಖರೀದಿಸಿತ್ತು.

Post Comments (+)