ಬುಧವಾರ, ನವೆಂಬರ್ 20, 2019
20 °C

ಎಲ್‌ಟಿಟಿಎಸ್ ಲಾಭ ಹೆಚ್ಚಳ

Published:
Updated:

ಮುಂಬೈ: ಎಲ್‌ಆ್ಯಂಡ್‌ಟಿ ಟೆಕ್ನಾಲಜೀಸ್‌ ಸರ್ವೀಸಸ್‌ ಲಿಮಿಟೆಡ್‌ (ಎಲ್‌ಟಿಟಿಎಸ್) ಕಂಪನಿಯು ಎರಡನೇ ತ್ರೈಮಾಸಿಕದಲ್ಲಿ ‌₹ 2,058 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ
ಶೇ 8ರಷ್ಟು ಏರಿಕೆಯಾಗಿದೆ. ವರಮಾನ ಶೇ 11ರಷ್ಟು ಹೆಚ್ಚಾಗಿದ್ದು ₹ 14,021 ಕೋಟಿಗೆ ತಲುಪಿದೆ. 

‘ತ್ರೈಮಾಸಿಕದಲ್ಲಿ ವರಮಾನವು ಎರಡಂಕಿ ಪ್ರಗತಿ ಸಾಧಿಸಿರುವುದು ಕಂಪನಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಸಾರಿಗೆ, ಪ್ಲಾಂಟ್‌ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಸಾಧನಗಳ ವಿಭಾಗವು ಶೇ 20ರಷ್ಟು ಬೆಳವಣಿಗೆ ಸಾಧಿಸಿವೆ’ ಎಂದು ಕಂಪನಿಯ ಸಿಇಒ ಕೇಶವ್‌ ಪಾಂಡಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)