ಮಹೀಂದ್ರಾ ಫೈನಾನ್ಸ್‌ ನಿವ್ವಳ ಲಾಭ₹ 1,557 ಕೋಟಿಗಳಿಗೆ ಏರಿಕೆ

ಸೋಮವಾರ, ಮೇ 27, 2019
29 °C

ಮಹೀಂದ್ರಾ ಫೈನಾನ್ಸ್‌ ನಿವ್ವಳ ಲಾಭ₹ 1,557 ಕೋಟಿಗಳಿಗೆ ಏರಿಕೆ

Published:
Updated:

ಮುಂಬೈ: ಗ್ರಾಮೀಣ ಮತ್ತು ಅರೆ ಪಟ್ಟಣ ಮಾರುಕಟ್ಟೆಗಳಲ್ಲಿ ಹಣಕಾಸು ಸೇವೆ ಒದಗಿಸುವ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ (ಮಹೀಂದ್ರಾ ಫೈನಾನ್ಸ್) 2018–19ನೆ ಹಣಕಾಸು ವರ್ಷದಲ್ಲಿ ₹ 1,557 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ₹ 1,076 ಕೋಟಿಗೆ ಹೋಲಿಸಿದರೆ ಶೇಕಡ 45ರಷ್ಟು ಪ್ರಗತಿ ದಾಖಲಿಸಿದೆ. ಒಟ್ಟು ವರಮಾನವು ಕಳೆದ ವರ್ಷದ
₹ 6,685 ಕೋಟಿಗಳಿಂದ ₹ 8,810 ಕೋಟಿಗೆ ಏರಿಕೆಯಾಗಿ ಶೇ 32ರಷ್ಟು ಹೆಚ್ಚಳ ಸಾಧಿಸಿದೆ.

ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡಿರುವ ನಾಲ್ಕನೇ ತ್ರೈಮಾಸಿಕದಲ್ಲಿ ₹ 588 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 314 ಕೋಟಿಗೆ ಹೋಲಿಸಿದರೆ ಶೇ 87ರಷ್ಟು ಪ್ರಗತಿ ದಾಖಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !