ಅಮೆರಿಕ–ಇರಾನ್ ಯುದ್ಧ ಆರಂಭವಾದಾಗಿನಿಂದ ತೈಲ ಸಾಗಾಣೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಪರಿಣಾಮ ಜಗತ್ತಿನಾದ್ಯಂತ ತೈಲ ಸಾಗಣೆಯಲ್ಲಿ ಏರುಪೇರಾಗಿದೆ.

ಈ ನಡುವೆ ಭಾರತದಲ್ಲಿ ಮೇ 1ರಿಂದ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ವರದಿಯಾಗಿದೆ.

ಸಿಲಿಂಡರ್ಗಳನ್ನು ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವುದು, ಕಳ್ಳಸಂತೆ, ಸಬ್ಸಿಡಿ ಗ್ಯಾಸ್ ಸಿಲಿಂಡರ್ಗಳ ಕಳ್ಳ ಮಾರಾಟವನ್ನು ತಡೆಯುವ ಕಾರಣಕ್ಕೆ ಭಾರತದ ಪ್ರಮುಖ ಎಲ್ಪಿಜಿ ಪೂರೈಕೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಇಂಡೆನ್), ಭಾರತ್ ಪೆಟ್ರೋಲಿಯಂ (ಭಾರತ್ ಗ್ಯಾಸ್) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ (ಎಚ್ಪಿ ಗ್ಯಾಸ್) ಹೊಸ ನಿಯಮಗಳನ್ನು ತರಲು ಮುಂದಾಗಿದೆ ಎಂದು ಎನ್ಡಿಟಿವಿ ವರದಿ ತಿಳಿಸಿದೆ.

ಈಗಾಗಲೇ ಪಶ್ಚಿಮ ಏಷ್ಯಾ ಸಂಘರ್ಷದ ಕಾರಣದಿಂದ ಸಿಲಿಂಡರ್ಗಳನ್ನು ಬುಕ್ ಮಾಡುವ ಅವಧಿಯನ್ನು ನಗರ ಪ್ರದೇಶಗಳಲ್ಲಿ 20 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ನಿಗದಿಪಡಿಸಲಾಗಿದೆ. ಈ ದಿನಗಳ ಅಂತರದಲ್ಲಿ ಬುಕ್ ಮಾಡುವ ಪ್ರಯತ್ನ ಮಾಡಿದರೆ, ಸ್ವಯಂಚಾಲಿತವಾಗಿ ರದ್ದಾಗಲಿದೆ.

ಗ್ಯಾಸ್ ಡೆಲಿವರಿಗೆ ಒಟಿಪಿ ಕಡ್ಡಾಯ

ಗ್ರಾಹಕರು ಇನ್ನು ಮುಂದೆ ಗ್ಯಾಸ್ ತರಲು ಬಳಸುವ ಪುಸ್ತಕ ಅಥವಾ ರಶೀದಿಯನ್ನು ತೋರಿಸುವ ಮೂಲಕ ತಮ್ಮ ಸಿಲಿಂಡರ್ಗಳನ್ನು ಪಡೆಯಲು ಸಾಧ್ಯವಿಲ್ಲ. ಸಿಲಿಂಡರ್ ಬುಕ್ ಮಾಡಿದ ಬಳಿಕ ಪಡೆಯುವ ಒಟಿಪಿಯನ್ನು ನೀಡುವುದು ಕಡ್ಡಾಯವಾಗಿದೆ.

ಆಧಾರ್ ಆಧಾರಿತ ಇ–ಕೆವೈಸಿ

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಎಲ್ಪಿಜಿ ಸಿಲಿಂಡರ್ ಪಡೆಯುವವರು ಕಡ್ಡಾಯವಾಗಿ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಪಡೆಯಬೇಕಿದೆ. ಈವರೆಗೆ ಯಾರು ಇ–ಕೆವೈಸಿ ಮಾಡಿಸಿಲ್ಲವೋ ಅಂತಹವರು ಕಡ್ಡಾಯವಾಗಿ ಪೂರ್ಣಗೊಳಿಸಲು ಸರ್ಕಾರ ಸೂಚಿಸಿದೆ.

ಹೊಸ ಸಂಪರ್ಕ ಸಿಗದು

ಯಾರು ಈಗಾಗಲೇ ತಮ್ಮ ಮನೆಯಲ್ಲಿ PNG (ಪೈಪ್ ಗ್ಯಾಸ್) ಸಂಪರ್ಕವನ್ನು ಹೊಂದಿರುತ್ತಾರೋ ಅಂತಹವರು ಹೊಸದಾಗಿ ಎಲ್ಪಿಜಿ ಸಿಲಿಂಡರ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವಂತಿಲ್ಲ. ಅಷ್ಟೇ ಅಲ್ಲದೆ, ಅವರು ತಮ್ಮ ಹಳೆಯ ಎಲ್ಪಿಜಿ ಸಂಪರ್ಕವನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ಒಂದು ವೇಳೆ ನೀವು ವಾಸವಿರುವ ಪ್ರದೇಶದಲ್ಲಿ ಪಿಎನ್ಜಿ ಪೂರೈಕೆಯ ಸೌಲಭ್ಯ ಲಭ್ಯವಿದ್ದರೂ, ಇನ್ನೂ ಸಿಲಿಂಡರ್ ಬಳಸುತ್ತಿದ್ದರೆ, ಕಡ್ಡಾಯವಾಗಿ ಪಿಎನ್ಜಿಗೆ ಬದಲಾಗಬೇಕಾಗುತ್ತದೆ.

ಬೆಲೆಯಲ್ಲಿ ಪರಿಷ್ಕರಣೆ

ಪಶ್ಚಿಮ ಏಷ್ಯಾ ಸಂಘರ್ಷ ಉಂಟಾದ ಬಳಿಕ 14.2 ಕೆ.ಜಿ ಸಿಲಿಂಡರ್ ಬೆಲೆ ₹60 ಹೆಚ್ಚಳವಾಗಿದ್ದು, ವಾಣಿಜ್ಯ ಬಳಕೆಯ 19 ಕೆ.ಜಿ ಸಿಲಿಂಡರ್ ಬೆಲೆಯಲ್ಲೂ ಏರಿಕೆಯಾಗಿತ್ತು. ಮೇ.1 ರಿಂದ ಬೆಲೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

ಪೂರೈಕೆ ಹೇಗಿದೆ ಈಗ?

ಕಚ್ಚಾ ತೈಲದ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ಭಾರತದ ತೈಲ ಕಂಪನಿಗಳು ಹೆಚ್ಚುವರಿ ಎಲ್ಪಿಜಿಯನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿವೆ. ಜೂನ್ ಮತ್ತು ಜುಲೈ ನಡುವೆ ಅನಿಲ ಹಡಗುಗಳು ಭಾರತಕ್ಕೆ ತಲುಪುವ ಸಂಭವವಿದೆ. ಭಾರತಕ್ಕೆ ಪ್ರತಿದಿನ 80 ಸಾವಿರ ಟನ್ಗಳಷ್ಟು ಎಲ್ಪಿಜಿ ಅಗತ್ಯವಿದೆ. ದೇಶೀಯ ಉತ್ಪಾದನೆಯು ಸರಿಸುಮಾರು 46,000 ಟನ್ಗಳಷ್ಟಿದೆ.

ಆಧಾರ: ಎನ್ಡಿಟಿವಿ, ಬ್ಯುಸಿನೆಸ್ ಟುಡೇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.