ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರು ಹೆಚ್ಚು ನಂಬುವುದು ಭಾರತದ ಹಣಕಾಸು ಮಾರುಕಟ್ಟೆಯನ್ನೇ: ಸಮೀಕ್ಷೆ

Last Updated 24 ಜೂನ್ 2020, 16:33 IST
ಅಕ್ಷರ ಗಾತ್ರ

ನವದೆಹಲಿ: ಬಹುಪಾಲು ಹೂಡಿಕೆದಾರರು ಭಾರತದ ಹಣಕಾಸು ಮಾರುಕಟ್ಟೆಯ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಸಿಎಫ್‌ಎ ಇನ್‌ಸ್ಟಿಟ್ಯೂಟ್‌ ನಡೆಸಿರುವ ‘ಟ್ರಸ್ಟ್‌ ಸರ್ವೆ’ ಪ್ರಕಾರ, 15 ಮಾರುಕಟ್ಟೆಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ.

2019ರ ಅಕ್ಟೋಬರ್‌–ನವೆಂಬರ್‌ ಅವಧಿಯಲ್ಲಿ 3,525 ರಿಟೇಲ್‌ ಹೂಡಿಕೆದಾರರು ಮತ್ತು 921 ಸಾಂಸ್ಥಿಕ ಹೂಡಿಕೆದಾರರಿಂದ ಅಭಿಪ್ರಾಯ ಸಂಗ್ರಹಿಸಿ, ಈ ವರದಿ ನೀಡಿದೆ.

ಆಸ್ಟ್ರೇಲಿಯಾ, ಬ್ರೆಜಿಲ್‌, ಕೆನಡಾ, ಫ್ರಾನ್ಸ್‌, ಜರ್ಮನಿ, ಜಪಾನ್‌, ಮೆಕ್ಸಿಕೊ, ಸಿಂಗಪುರ, ದಕ್ಷಿಣ ಆಫ್ರಿಕಾ, ಯುಎಇ, ಇಂಗ್ಲೆಂಡ್‌, ಅಮೆರಿಕ, ಹಾಂಗ್‌ಕಾಂಗ್‌ ಮತ್ತು ಚೀನಾದಲ್ಲಿಯೂ ಸಮೀಕ್ಷೆ ಕೈಗೊಳ್ಳಲಾಗಿತ್ತು.

ಭಾರತದ ಹೂಡಿಕೆದಾರರು ದೇಶಿ ಹಣಕಾಸು ಮಾರುಕಟ್ಟೆಯನ್ನು ನಂಬುವ ಪ್ರಮಾಣವು 2018ರಲ್ಲಿ ಶೇ 71ರಷ್ಟಿತ್ತು. ಇದು 2019ರಲ್ಲಿ ಶೇ 87ಕ್ಕೆ ಏರಿಕೆಯಾಗಿದೆ.

ಶೇ 47ರಷ್ಟು ಹೂಡಿಕೆದಾರರು ಜಾಗತಿಕವಾಗಿ ಮತ್ತು ಶೇ 49ರಷ್ಟು ಹೂಡಿಕೆದಾರರು ಏಷ್ಯಾ ಪೆಸಿಫಿಕ್‌ನಲ್ಲಿ ಹಣಕಾಸು ಸೇವಾ ಉದ್ಯಮವನ್ನು ನಂಬುತ್ತಿದ್ದಾರೆ.

‘ಭಾರತದ ಷೇರುಪೇಟೆಯು ದೀರ್ಘಾವಧಿಗೆ ಉತ್ತಮ ಗಳಿಕೆ ತಂದುಕೊಟ್ಟಿದೆ. ಇದು ವ್ಯವಸ್ಥೆಯ ಬಗೆಗಿನ ಆಶಾವಾದ, ನಂಬಿಕೆ ಮತ್ತು ಹೂಡಿಕೆದಾರರ ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಹಣಕಾಸಿನ ಜಗತ್ತಿನಲ್ಲಿ ಸವಾಲಿನ ಸಂದರ್ಭದಲ್ಲಿ ನಂಬಿಕೆಯು ಬಹಳ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಸಿಎಫ್‌ಎ ಇನ್‌ಸ್ಟಿಟ್ಯೂಟ್‌ನ ಭಾರತದ ಮುಖ್ಯಸ್ಥ ವಿಧು ಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT