ಶನಿವಾರ, ಅಕ್ಟೋಬರ್ 24, 2020
24 °C

ಮಲಬಾರ್‌ನಿಂದ ‘ಆರ್ಟಿಸ್ಟ್ರಿ’ ಚಿನ್ನಾಭರಣ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಪ್ರತಿಷ್ಠಿತ ಚಿನ್ನ, ವಜ್ರಾಭರಣಗಳ ಮಾರಾಟ ಕಂಪನಿ ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್ ತನ್ನ ಜಯನಗರ ಮಳಿಗೆಯಲ್ಲಿ ‘ಆರ್ಟಿಸ್ಟ್ರಿ’ ನೂತನ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದೆ. 

ಅಮೂಲ್ಯ ಮುತ್ತು–ರತ್ನ, ಹವಳ ಗಳನ್ನು ಬಳಸಿದ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹವನ್ನು ಗ್ರಾಹಕರು ಕಣ್ತುಂಬಿಕೊಳ್ಳಬಹುದು. ಅ.11ರವರೆಗೆ ಈ ಮೇಳ ಇರಲಿದೆ.

ಮಲಬಾರ್‌ ಕಂಪನಿಯ ಬ್ರ್ಯಾಂಡ್‌ಗಳಾದ ಮೈನ್‌ ಡೈಮಂಡ್, ಎರಾ ಅನ್‌ಕಟ್‌, ಡಿವೈನ್‌ ಇಂಡಿಯನ್‌ ಹೆರಿಟೇಜ್, ಎತ್ನಿಕ್ಸ್, ಪ್ರೀಶಿಯಾದ ಚಿನ್ನಾಭರಣಗಳೂ ಮೇಳದಲ್ಲಿಪ್ರದರ್ಶನಗೊಳ್ಳಲಿವೆ.   ಮೇಳದ ಅಂಗವಾಗಿ ತಯಾರಿಕೆ ಶುಲ್ಕದ ಪೈಕಿ ಪ್ರತಿ ಗ್ರಾಂಗೆ ₹150 ಕಡಿತ ಮಾಡಲಾಗುತ್ತದೆ. ವಜ್ರಾಭರಣಗಳ ಮೌಲ್ಯದ ಮೇಲೆ ಶೇ 20ರಷ್ಟು ರಿಯಾಯಿತಿ ನೀಡ ಲಾಗುವುದು ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು