ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರ್‌ ಗೋಲ್ಡ್‌: ಏಕರೂಪದ ಚಿನ್ನದ ಬೆಲೆ ಗ್ರಾಹಕರ ಮೆಚ್ಚುಗೆ

Last Updated 14 ನವೆಂಬರ್ 2020, 4:09 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಾಭರಣಗಳ ಮಾರಾಟ ಸಂಸ್ಥೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್, ಆರಂಭಿಸಿರುವ ‘ಒಂದು ಭಾರತ ಒಂದು ಚಿನ್ನದ ದರ’ ಯೋಜನೆಗೆ ದೇಶದಾದ್ಯಂತ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ಸ್ಥಳೀಯ ಚಿನಿವಾರ ಪೇಟೆಗಳು ಮತ್ತು ಚಿನ್ನಾಭರಣ ವರ್ತಕರ ಸಂಘಗಳು ಬೆಲೆ ನಿರ್ಧರಿಸುತ್ತವೆ. ಹೀಗಾಗಿ ದೇಶದಲ್ಲಿ ಚಿನ್ನ ಮತ್ತು ಚಿನ್ನಾಭರಣಗಳ ಮಾರಾಟ ದರವು ಅನೇಕ ಕಾರಣಗಳಿಗೆ ನಗರದಿಂದ ನಗರಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಲಿದೆ. ಚಿನ್ನಾಭರಣ ಖರೀದಿಸುವ ಸಂದರ್ಭದಲ್ಲಿ ಗ್ರಾಹಕರಿಗೆ ಗೊಂದಲ ಮೂಡಿಸುತ್ತಿದ್ದ ಈ ಬೆಲೆ ವ್ಯತ್ಯಾಸದ ವಿದ್ಯಮಾನಕ್ಕೆ ಸಂಸ್ಥೆಯು ಈಗ ಕೊನೆ ಹಾಡಿದೆ.

ದೇಶದಲ್ಲಿ ಮೊದಲ ಬಾರಿಗೆ ಚಿನ್ನಾಭರಣಗಳ ಹಾಲ್‌ಮಾರ್ಕ್‌ ಬಳಕೆಗೆ ತಂದಿದ್ದ ಮಲಬಾರ್‌ ಗೋಲ್ಡ್‌, ದೇಶದಾದ್ಯಂತ ಏಕರೂಪದ ದರ ಜಾರಿಗೆ ತರುವಲ್ಲಿಯೂ ಮೊದಲ ಹೆಜ್ಜೆ ಇರಿಸಿದೆ.

‘ದೇಶದಾದ್ಯಂತ ಜಿಎಸ್‌ಟಿ ಶೇ 3ರಷ್ಟು ಏಕರೂಪದಲ್ಲಿ ಇರುವಾಗ, ಕಸ್ಟಮ್ಸ್‌ ದರಗಳು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆ ಕೂಡ ಒಂದೇ ಮಟ್ಟದಲ್ಲಿ ಇರುವುದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು, ಬೆಲೆ ವಿಷಯದಲ್ಲಿ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ‘ ಎಂದು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಭಾರತದ ವಹಿವಾಟಿನ ವ್ಯವಸ್ಥಾಪಕ ನಿರ್ದೇಶಕ ಅಶರ್‌ ಒಟ್ಟಾಮುಚಿಕ್ಕಲ್ ಅವರು ಹೇಳಿದ್ದಾರೆ.

‘ದೇಶದಾದ್ಯಂತ ಇರುವ ಸಂಸ್ಥೆಯ 120 ಮಳಿಗೆಗಳಲ್ಲಿ ಈ ನಿರ್ಧಾರಕ್ಕೆ ಗ್ರಾಹಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಆನ್‌ಲೈನ್‌ ತಾಣಗಳು ಮತ್ತು ಮಳಿಗೆಗಳಲ್ಲಿನ ಬೆಲೆ ವ್ಯತ್ಯಾಸವು ಗ್ರಾಹಕರಲ್ಲಿ ಮೂಡಿಸುತ್ತಿದ್ದ ಗೊಂದಲಕ್ಕೆ ತೆರೆ ಎಳೆಯಲು ಈ ಏಕರೂಪದ ಬೆಲೆ ನೆರವಾಗಲಿದೆ.

‘ಚಿನ್ನಾಭರಣಗಳನ್ನು ಹೆಚ್ಚಾಗಿ ಮಹಿಳೆಯರೇ ಖರೀದಿಸುವುದರಿಂದ ಅವರಿಗಾಗಿ ಪಾರದರ್ಶಕ ಬೆಲೆ ನೀತಿ ಅನುಸರಿಸುವುದು ಹೆಚ್ಚು ಸಮಂಜಸವಾಗಿರಲಿದೆ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಚಿನ್ನಾಭರಣಗಳ ಖರೀದಿಗೆ ಒಂದೇ ದರ ಇರಬೇಕು ಎನ್ನುವುದು ಗ್ರಾಹಕರ ಬಹಳ ದಿನಗಳ ಬೇಡಿಕೆಯಾಗಿತ್ತು.

‘ಈ ನಿರ್ಧಾರಕ್ಕೆ ದೇಶಿ ಚಿನ್ನದ ಉದ್ದಿಮೆಯು ಸಮ್ಮಿಶ್ರ ರೀತಿಯಲ್ಲಿ ಪ್ರತಿಕ್ರಿಯಿಸಿದೆ. ಹಿಂದೆ ಚಿನ್ನಾಭರಣಗಳ ಶುದ್ಧತೆಯ ಖಚಿತತೆಗಾಗಿ ನಾವು ಹಾಲ್‌ಮಾರ್ಕ್‌ ಸೌಲಭ್ಯ ಜಾರಿಗೆ ತಂದಾಗಲೂ ಇದೇ ಬಗೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಆಭರಣಗಳ ಹಾಲ್‌ಮಾರ್ಕಿಂಗ್‌ಗೆ ವ್ಯಾಪಕ ಮನ್ನಣೆ ದೊರೆತಿದೆ. ಗ್ರಾಹಕರೇ ಸಾರ್ವಭೌಮ ಆಗಿರುವಾಗ ಅವರಿಗಾಗಿ ಏಕರೂಪದ ಬೆಲೆ ಜಾರಿಗೆ ತರುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದರಿಂದ ಒಟ್ಟಾರೆ ಚಿನ್ನಾಭರಣ ಉದ್ದಿಮೆಗೇ ಪ್ರಯೋಜನಕಾರಿಯಾಗಲಿದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT