ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ ₹1.09 ಕೋಟಿ ಲಾಭಗಳಿಸಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ನೌಕರರು ತಮ್ಮ ಆರ್ಥಿಕ ಬಲವರ್ಧನೆಗಾಗಿ ಸ್ಥಾಪಿಸಿದ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರಿ ಸಂಘವು ಇದೀಗ 95 ವರ್ಷಗಳನ್ನು ಪೂರೈಸಿದೆ. ಆರಂಭಿಕ71 ವರ್ಷಗಳ ಕಾಲ ಅರೆಕಾಲಿಕವಾಗಿ ಕಾರ್ಯನಿರ್ವಹಿಸಿದ್ದ ಸಂಘವು 2001ರವರೆಗೆ ಕೇವಲ ₹3.84 ಲಕ್ಷ ಠೇವಣಿ ಹಾಗೂ ₹3.13 ಲಕ್ಷ ಮುಂಗಡ ದೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಕಳೆದ 25 ವರ್ಷಗಳಲ್ಲಿ ಸಂಘ ಅದ್ಭುತ ಬೆಳವಣಿಗೆ ಕಂಡಿದೆ.

ಶನಿವಾರ ನಡೆದ ಸಂಘದ ಸಭೆಯಲ್ಲಿ ಪ್ರಕಟಿಸಿದ ಆರ್ಥಿಕ ತಖ್ತೆಯ ಪ್ರಕಾರ 2024-25ರ ಆರ್ಥಿಕ ವರ್ಷದಲ್ಲಿ ₹94.33 ಕೋಟಿ ಠೇವಣಿ ಹೊಂದಿದ್ದ ಸಂಘವು 2025-26ರ ಆರ್ಥಿಕ ವರ್ಷದಲ್ಲಿ ₹100 ಕೋಟಿಗಳ ಮೈಲಿಗಲ್ಲನ್ನು ದಾಟಿ ₹108.10 ಕೋಟಿ ಠೇವಣಿ ಹೊಂದಿದೆ. ಠೇವಣಿ ಸಂಗ್ರಹಣೆಯ ಜೊತೆಗೆ ಸಾಲ ಮುಂಗಡದಲ್ಲೂ ಏರಿಕೆಯಾಗಿದ್ದು ₹82.91 ಕೋಟಿಯಿಂದ ವರದಿ ವರ್ಷದಲ್ಲಿ ₹91.91 ಕೋಟಿಗೆ ಏರಿಕೆಯಾಗಿದೆ. ಹಾಗೆಯೇ ಸಂಘದ ಒಟ್ಟು ವ್ಯವಹಾರ ₹177.23 ಕೋಟಿಯಿಂದ ಇದೀಗ ₹200.01 ಕೋಟಿಗೆ ವೃದ್ಧಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಂಘವು ಪ್ರಸ್ತುತ 1140 'ಎ' ವರ್ಗದ ಸದಸ್ಯರನ್ನು ಹೊಂದಿದೆ. ಸಂಘವು 2024-25ನೇ ಸಾಲಿನಲ್ಲಿ ₹95.32 ಲಕ್ಷ ಲಾಭ ಗಳಿಸಿತ್ತು. ಇದೀಗ 2025-26ನೇ ಸಾಲಿನಲ್ಲಿ ₹108.10ಕೋಟಿ ಲಾಭ ಗಳಿಸಿದೆ. ಸಂಘವು ₹29.12 ಲಕ್ಷ ಪಾಲು ಬಂಡವಾಳ, ₹6.31 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ. ಸದಸ್ಯರ ಬೆಂಬಲ, ಸಿಬ್ಬಂದಿಯ ಪ್ರಾಮಾಣಿಕ ಸೇವೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರ ಸಂಘಟಿತ ಕಾರ್ಯ ನಿರ್ವಹಣೆಯಿಂದ ಸಂಘವು ಅಭಿವೃದ್ಧಿಯ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಎರಡು , ಉಡುಪಿ ಹಾಗೂ ಪುತ್ತೂರಲ್ಲಿ ತಲಾ ಒಂದು ಶಾಖೆಯನ್ನು ಸಂಘ ಹೊಂದಿದೆ.

ಸಂಘದ ಸಭೆಯಲ್ಲಿ ಉಪಾಧ್ಯಕ್ಷ ರಾಘವ ಆರ್. ಉಚ್ಚಿಲ್, ನಿರ್ದೇಶಕರಾದ ದಿವಾಕರ ಶೆಟ್ಟಿ ಕೆ, ವಿಶ್ವೇಶ್ವರ ಐತಾಳ್ , ಜಯಪ್ರಕಾಶ್ ರೈ ಸಿ, ಗಿರಿಧರ್ ಕೆ, ವಿಶ್ವನಾಥ ಕೆ ಟಿ, ಶಿವಾನಂದ ಪಿ, ಚಂದ್ರಕಲಾ ಕೆ., ಮೋಹನ್ ಎನ್ , ವಿಶ್ವನಾಥ್ ಎನ್. ಅಮೀನ್ , ಗೀತಾಕ್ಷಿ , ಕಿರಣ್ ಕುಮಾರ್ ಶೆಟ್ಟಿ , ನಿಶಿತಾ ಜಯರಾಮ್, ಪ್ರೇಮ್ ರಾಜ್ ಭಂಡಾರಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-29-1809748258

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.