ಮಂಗಳೂರು: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ (ಐಸಿಎಐ) ವೃತ್ತಿಪರ ಅಭಿವೃದ್ಧಿ ಸಮಿತಿಯು ಮಂಗಳೂರು ಶಾಖೆಯ ಸಹಯೋಗದಲ್ಲಿ ಲೆಕ್ಕಪರಿಶೋಧಕರಿಗಾಗಿ ಮೇ 15 ಮತ್ತು 16ರಂದು ಮೇರಿಹಿಲ್ನ ಪಾಲೆಮಾರ್ ಕನ್ವೆನ್ಷನ್ ಸೆಂಟರ್ನಲ್ಲಿ ‘ಅಧಿಗಮ– ಜ್ಞಾನದ ಬಲವರ್ಧನೆ’ ಎಂಬ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಮಾಹಿತಿ ನೀಡಿದ ಐಸಿಎಐ ದಕ್ಷಿಣ ಭಾರತ ಪ್ರಾದೇಶಿಕ ಸಮಿತಿ (ಎಸ್ಐಆರ್ಸಿ) ಮಂಗಳೂರು ಶಾಖೆ ಅಧ್ಯಕ್ಷ ಡೇನಿಯಲ್ ಮಾರ್ಷ್ ಪಿರೇರ, 15ರಂದು ಬೆಳಿಗ್ಗೆ 11ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದರು.

ಸಮ್ಮೇಳನದಲ್ಲಿ 7 ಅಧಿವೇಶನಗಳು ನಡೆಯಲಿವೆ. ವೃತ್ತಿಯಲ್ಲಿನ ಉದಯೋನ್ಮುಖ ಬೆಳವಣಿಗೆಗಳು, ತಂತ್ರಜ್ಞಾನ ಚಾಲಿತ ರೂಪಾಂತರ, ಸಮಕಾಲೀನ ನಿಯಂತ್ರಕ ಬದಲಾವಣೆಗಳ ಬಗ್ಗೆ ಒಳನೋಟಗಳೊಂದಿಗೆ ವೃತ್ತಿಪರರನ್ನು ಸಜ್ಜುಗೊಳಿಸುವ ಉದ್ದೇಶ ಹೊಂದಿದೆ. ದೇಶದ ವಿವಿಧೆಡೆಯ 500ಕ್ಕೂ ಅಧಿಕ ಚಾರ್ಟರ್ಡ್ ಅಕೌಂಟೆಂಟ್ಗಳು, ವೃತ್ತಿಪರರು ಭಾಗವಹಿಸುವರು. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮಾಹಿತಿಗೆ ಮೊ: 9844773582 ಸಂಪರ್ಕಿಸಬಹುದು ಎಂದರು.

ಎಸ್ಐಆರ್ಸಿ ಮಂಗಳೂರು ಶಾಖೆ ಉಪಾಧ್ಯಕ್ಷೆ ಮಮತಾ ರಾವ್, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಎನ್, ಖಜಾಂಚಿ ನಿತಿನ್ ಬಾಳಿಗ, ಸಿಕಾಸ ಅಧ್ಯಕ್ಷ ಗೌರವ್ ಹೆಗ್ಡೆ, ಸದಸ್ಯರಾದ ಪ್ರಶಾಂತ್ ಪೈ ಕೆ, ಕೃಷ್ಣಾನಂದ ಪೈ ಬಿ. ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-1411382868

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.