ಮಂಗಳೂರು: ಮೇ ಅಂತ್ಯಕ್ಕೆ ಮುಕ್ತಾಯವಾದ ಮೀನುಗಾರಿಕಾ ಋತುವಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ ಮೀನಿನ ಇಳುವರಿಯು ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಇಂಧನ ಪೂರೈಕೆ ವ್ಯತ್ಯಯದ ಸವಾಲಿನ ನಡುವೆಯೂ ಕಳೆದ ವರ್ಷಕ್ಕಿಂತ ತುಸು ಹೆಚ್ಚಳವಾಗಿದೆ.

ಮೀನುಗಾರಿಕಾ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2025ರ ಏಪ್ರಿಲ್ನಿಂದ 2026 ರ ಮಾರ್ಚ್ವರೆಗಿನ ಮೀನಿನ ಒಟ್ಟು ಇಳುವರಿ 1,97,381 ಟನ್. ಇದರ ಅಂದಾಜು ಮೌಲ್ಯ ₹ 3,856.51 ಕೋಟಿ. ಕಳೆದ ವರ್ಷದ ಮೀನುಗಾರಿಕಾ ಋತುವಿನಲ್ಲಿ ಸಿಕ್ಕಿದ್ದು 1,71,795 ಟನ್ (ಅಂದಾಜು ₹ 2,220.49 ಕೋಟಿ ಮೌಲ್ಯ) ಮೀನು ಮಾತ್ರ. ಅದಕ್ಕಿಂತ ಹಿಂದಿನ ವರ್ಷ (2023-24) 2,39,758 ಟನ್ ಮೀನು (ಅಂದಾಜು ₹ 3,976.65 ಕೋಟಿ ಮೌಲ್ಯ ) ಲಭಿಸಿತ್ತು. 2023–24ನೇ ಸಾಲಿಗೆ ಹೋಲಿಸಿದರೆ 2024–25ನೇ ಸಾಲಿನಲ್ಲಿ ಮೀನಿನ ಲಭ್ಯತೆ ಸುಮಾರು 67,963 ಟನ್ಗಳಷ್ಟು ಕುಸಿತ ಕಂಡಿತ್ತು. 2024–25ನೇ ಸಾಲಿಗೆ ಹೋಲಿಸಿದರೆ 2025–26ರಲ್ಲಿ ಮೀನಿನ ಲಭ್ಯತೆ 25,586 ಟನ್ಗಳಷ್ಟು ಹೆಚ್ಚಳವಾಗಿದೆ. ಆದರೂ 2023–24ಕ್ಕೆ ಹೋಲಿಸಿದರೆ ಈ ವರ್ಷದ ಇಳುವರಿ 42,377 ಟನ್ಗಳಷ್ಟು ಕಡಿಮೆ ಇದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲದ ಮೀನುಗಾರಿಕಾ ಋತುವಿನಲ್ಲಿ ಮೀನಿನ ಇಳುವರಿ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿದೆ. 2025ರಲ್ಲಿ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗಿತ್ತು. ಹಾಗಾಗಿ ಸಮುದ್ರದ ಮೇಲ್ಮೈ ತಾಪಮಾನ ತಂಪಾಗಿತ್ತು. ಅದರ ಪರಿಣಾಮವಾಗಿ, ಏಪ್ರಿಲ್-ಮೇ ತಿಂಗಳಲ್ಲೂ ಮೀನುಗಳು ಲಭ್ಯತೆ ಉತ್ತಮವಾಗಿತ್ತು’ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮೀನುಗಾರಿಕಾ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕಿ ದರ್ಶನಾ ಕೆ.ಟಿ. ತಿಳಿಸಿದ್ದಾರೆ.

1986ರ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆಯಡಿ ಹೊರಡಿಸಲಾದ ಸರ್ಕಾರಿ ಅಧಿಸೂಚನೆಯಂತೆ, ಮೀನುಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಜೂನ್ 1 ರಿಂದ ಜುಲೈ 31 ರವರೆಗೆ 61 ದಿನಗಳ ಕಾಲ ಆಳ ಸಮುದ್ರ ಮೀನುಗಾರಿಕೆ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ 10 ಅಶ್ವಶಕ್ತಿವರೆಗಿನ ಸಾಮರ್ಥ್ಯದ ಎಂಜಿನ್ ಅಳವಡಿಸಿದ ದೋಣಿಗಳು ಹಾಗೂ ಸಾಂಪ್ರದಾಯಿಕ ದೋಣಿಗಳು ಮೀನುಗಾರಿಕೆ ನಡೆಸಬಹುದು. ಅದಕ್ಕಿಂತ ಹೆಚ್ಚು ಅಶ್ವಶಕ್ತಿ ಸಾಮರ್ಥ್ಯದ ದೋಣೀಗಳು ನಿಯಮ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದರೆ ದಂಡ ವಿಧಿಸಲಾಗುವುದು. ಅಂತಹ ಮೀನುಗಾರರಿಗೆ ಒಂದು ವರ್ಷದ ಅವಧಿಗೆ ಡೀಸೆಲ್ ಸಬ್ಸಿಡಿ ನೀಡುವುದಿಲ್ಲ ಎಂದು ಅವರು ತಿಳಿಸಿದರು.

‘ಕಳೆದ ವರ್ಷಕ್ಕಿಂತ ಈ ವರ್ಷ ಮೀನುಗಾರಿಕೆ ಸ್ವಲ್ಪಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೆ, ಈ ವರ್ಷ ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ನಡೆದ ಯುದ್ಧದಿಂದಾಗಿ ಇಂಧನ ಪೂರೈಕೆ ಹಾಗೂ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಕೆಲ ದೋಣಿ ಮಾಲೀಕರು ಸಂಕಷ್ಟಕ್ಕೆ ಒಳಗಾದರು. ಕೆಲ ಮೀನುಗಾರರು ಋತುವಿನ ಕೊನೆಯ ಎರಡು ತಿಂಗಳು ದೋಣಿಗಳನ್ನು ಕಡಲಿಗೆ ಇಳಿಸಲೇ ಇಲ್ಲ’ ಎನ್ನುತ್ತಾರೆ ಮೀನುಗಾರರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-29-929630116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.