ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊ ಕೆಮಿಕಲ್ಸ್ (ಎಂಆರ್ಪಿಎಲ್) ಸಂಸ್ಥೆ 2025–26ನೇ ಆರ್ಥಿಕ ವರ್ಷದಲ್ಲಿ ಒಟ್ಟು ₹1,931 ಕೋಟಿ ನಿವ್ವಳ ಲಾಭ ದಾಖಲಿಸಿದೆ.

ಶುಕ್ರವಾರ ನಡೆದ ನಿರ್ದೇಶಕರ ಮಂಡಳಿಯ 274ನೇ ಸಭೆಯಲ್ಲಿ 2025–26ನೇ ಸಾಲಿನ ಆರ್ಥಿಕ ಫಲಿತಾಂಶ ಹಾಗೂ ನಾಲ್ಕನೇ ತ್ರೈಮಾಸಿಕದ ಫಲಿತಾಂಶಕ್ಕೆ ಅನುಮೋದನೆ ನೀಡಲಾಯಿತು.

ನಾಲ್ಕನೇ ತ್ರೈಮಾಸಿಕದಲ್ಲಿ ಸಂಸ್ಥೆ ₹28,493 ಕೋಟಿ ವಹಿವಾಟು ನಡೆಸಿ ₹119 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಹಿವಾಟಿನಲ್ಲಿ (₹27,602 ಕೋಟಿ) ಅಲ್ಪ ಏರಿಕೆ ಯಾಗಿದ್ದರೂ ನಿವ್ವಳ ಲಾಭದಲ್ಲಿ (ಕಳೆದ ವರ್ಷದ ಇದೇ ಅವಧಿಯಲ್ಲಿ ₹363 ಕೋಟಿ) ಭಾರಿ ಇಳಿಕೆಯಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆ ಒಟ್ಟಾರೆ ₹1,05,155 ಕೋಟಿ ವಹಿವಾಟು ನಡೆಸಿದೆ. ಇದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ (₹1,09,280 ಕೋಟಿ) ಒಟ್ಟು ವಹಿವಾಟಿನಲ್ಲಿ ಅಲ್ಪ ಇಳಿಕೆ ದಾಖಲಾಗಿದೆ. ಆದರೆ, 2024–25ನೇ ಸಾಲಿನಲ್ಲಿ ಸಂಸ್ಥೆಯ ನಿವ್ವಳ ಲಾಭ ಕೇವಲ ₹51 ಕೋಟಿ ಇತ್ತು. ಈ ವರ್ಷ ಅದು ₹1,931 ಕೋಟಿಯಷ್ಟಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕೊನೆಯ ತ್ರೈಮಾಸಿಕದಲ್ಲಿ ಸಂಸ್ಥೆ 43.5 ಲಕ್ಷ ಟನ್ ಕಚ್ಚಾ ತೈಲ ಸಂಸ್ಕರಣೆ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಅದರ ಪ್ರಮಾಣ 46.4 ಲಕ್ಷ ಟನ್ ಆಗಿತ್ತು. ಒಟ್ಟಾರೆ ಆರ್ಥಿಕ ವರ್ಷದಲ್ಲಿ 1.7 ಕೋಟಿ ಟನ್ (ಕಳೆದ ವರ್ಷ 1.81 ಕೋಟಿ ಟನ್) ತೈಲ ಸಂಸ್ಕರಣೆ ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-51-2086655964

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.