ತಯಾರಿಕಾ ವಲಯದ ಪ್ರಗತಿ ಕುಂಠಿತ

ಗುರುವಾರ , ಏಪ್ರಿಲ್ 25, 2019
26 °C
ಹಣದುಬ್ಬರದ ಒತ್ತಡ, ತಯಾರಿಕಾ ವೆಚ್ಚ ಹೆಚ್ಚಳ

ತಯಾರಿಕಾ ವಲಯದ ಪ್ರಗತಿ ಕುಂಠಿತ

Published:
Updated:

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆ ಮಾರ್ಚ್‌ನಲ್ಲಿ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಮ್ಯಾನ್ಯುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) 54.3 ರಿಂದ 52.6ಕ್ಕೆ ಇಳಿಕೆಯಾಗಿದೆ ಎಂದು ನಿಕೇಯ್‌ ಇಂಡಿಯಾ ಸಂಸ್ಥೆ ತಿಳಿಸಿದೆ.

ಕಾರ್ಯಾಚರಣೆ ಸುಧಾರಿಸುತ್ತಿದೆ. ಹೊಸ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ತಯಾರಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿಯೂ ಪ್ರಗತಿ ಕಂಡುಬರುತ್ತಿದೆ. ಆದರೆ, ಹಣದುಬ್ಬರದ ಒತ್ತಡ, ವೆಚ್ಚದಲ್ಲಿನ ಏರಿಕೆಯಿಂದಾಗಿ ತಯಾರಿಕಾ ವಲಯದ ಚಟುವಟಿಕೆ ಇಳಿಕೆಯಾಗಿದೆ. ಕೈಗಾರಿಕೆಗಳ ಬೇಡಿಕೆ ಮತ್ತು ತಯಾರಿಕಾ ವಲಯದ ವಿಸ್ತರಣೆಯು 2018ರ ಸೆಪ್ಟೆಂಬರ್‌ನಿಂದಲೂ ಇಳಿಮುಖವಾಗಿದೆ.

‘ಜಾಗತಿಕ ಆರ್ಥಿಕ ಪ್ರಗತಿಮಂದಗತಿಯಲ್ಲಿ ಇರುವುದು ಭಾರತದ ತಯಾರಿಕಾ ವಲಯದ ಭವಿಷ್ಯದ ಬಗ್ಗೆ ಸ್ವಲ್ಪ ಆತಂಕ ಮೂಡಿಸಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಮುಖ್ಯ ಆರ್ಥಿಕ ತಜ್ಞ ಪಾಲಿಯಾನ ಡಿ ಲಿಮಾ ಹೇಳಿದ್ದಾರೆ.

ಸೇವಾ ವಲಯದ ಪ್ರಗತಿ ಇಳಿಕೆ: ಸೇವಾ ವಲಯದ ಚಟುವಟಿಕೆ ಮಾರ್ಚ್‌ನಲ್ಲಿ 6 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ನಿಕೇಯ್‌ ಇಂಡಿಯಾ ಸರ್ವೀಸಸ್‌ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ 52.5 ರಿಂದ 52ಕ್ಕೆ ಇಳಿಕೆಯಾಗಿದೆ. ಇದು 2019ರ ಸೆಪ್ಟೆಂಬರ್‌ ನಂತರದ ಅತ್ಯಂತ ಕನಿಷ್ಠ ಮಟ್ಟವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !