ಶನಿವಾರ, ಸೆಪ್ಟೆಂಬರ್ 19, 2020
22 °C
ಹಣದುಬ್ಬರ ಇಳಿಕೆ, ಚೀನಾ ಸರಕಿಗೆ ಸುಂಕ

ಷೇರುಪೇಟೆ ವಹಿವಾಟು ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದೇಶದ ಷೇರುಪೇಟೆಗಳಲ್ಲಿ ಬುಧವಾರ ಸಕಾರಾತ್ಮಕ ವಹಿವಾಟು ನಡೆಯಿತು. ಇದರಿಂದ ಮಂಗಳವಾರ ಕರಗಿದ್ದ ₹ 2.21 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತಿನಲ್ಲಿ₹ 1.1 ಲಕ್ಷ ಕೋಟಿ ಮರಳಿ ಬಂದಿದೆ.

ಷೇರುಪೇಟೆಯ ಬಂಡವಾಳ ಮೌಲ್ಯ ₹139.46 ಲಕ್ಷ ಕೋಟಿಯಿಂದ₹140.56 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಚಿಲ್ಲರೆ ಮತ್ತು ಸಗಟು ಹಣದುಬ್ಬರ ಜುಲೈನಲ್ಲಿ ಇಳಿಕೆಯಾಗಿದೆ. ಚೀನಾದ ಸರಕುಗಳ ಮೇಲಿನ ಆಮದು ಸುಂಕ ಜಾರಿಯನ್ನು ಅಮೆರಿಕ ಸದ್ಯಕ್ಕೆ ತಡೆಹಿಡಿದೆ. ಈ ಸಂಗತಿಗಳು ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 353 ಅಂಶಗಳ ಏರಿಕೆ ಕಂಡು, 37,311 ಅಂಶಗಳಲ್ಲಿ ವಹಿ ವಾಟು ಅಂತ್ಯಗೊಂಡಿದೆ. ಎನ್‌ಎಸ್‌ಇ ನಿಫ್ಟಿ 104 ಅಂಶ ಹೆಚ್ಚಾಗಿ 11,029 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರೂಪಾಯಿ ವಿನಿಮಯ ದರವು ಬುಧವಾರ 13 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ₹ 71.27ರಂತೆ ವಿನಿಮಯಗೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು