ಕುಸಿದ ಸೂಚ್ಯಂಕ

ಬುಧವಾರ, ಜೂನ್ 19, 2019
26 °C

ಕುಸಿದ ಸೂಚ್ಯಂಕ

Published:
Updated:

ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಸಂಕೇತಗಳು ಸಿಗುತ್ತಿದ್ದಂತೆ ದಿನದ ಆರಂಭದಲ್ಲಿ  ದಾಖಲೆ ಮಟ್ಟದ ಏರಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ವಹಿವಾಟಿನ ಅಂತ್ಯದಲ್ಲಿ ಷೇರುಗಳ ಮಾರಾಟ ಒತ್ತಡದ ಕಾರಣಕ್ಕೆ 299 ಅಂಶಗಳಿಗೆ ಕುಸಿಯಿತು.

ಮತಗಟ್ಟೆ ಸಮೀಕ್ಷೆಯ ಅಂದಾಜಿನಂತೆಯೇ ಚುನಾವಣಾ ಫಲಿತಾಂಶದ ವಿವರಗಳು ಪ್ರಕಟಗೊಳ್ಳುತ್ತಿದ್ದಂತೆ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಮೇರೆ ಮೀರಿತ್ತು. ವಹಿವಾಟಿನ ಒಂದು ಹಂತದಲ್ಲಿ ಸಂವೇದಿ ಸೂಚ್ಯಂಕವು 1,000 ಅಂಶ ಹೆಚ್ಚಳ ಕಂಡು 40 ಸಾವಿರ ಅಂಶಗಳ ಗಡಿಯನ್ನು ಮೊದಲ ಬಾರಿಗೆ ದಾಟಿತ್ತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ಯೂ ಮೊದಲ ಬಾರಿಗೆ 12 ಸಾವಿರ ಅಂಶಗಳಿಗೆ ಏರಿಕೆಯಾಗಿತ್ತು. ನಂತರ ಈ ಉತ್ಸಾಹ ಕಾಯ್ದುಕೊಳ್ಳುವಲ್ಲಿ ಪೇಟೆ ವಿಫಲಗೊಂಡಿತು.

ಹೂಡಿಕೆದಾರರು ಗರಿಷ್ಠ ಬೆಲೆ ಮಟ್ಟದಲ್ಲಿ ಇದ್ದ ಷೇರುಗಳನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಮುಗಿ ಬಿದ್ದರು. ಇದರಿಂದ ಸೂಚ್ಯಂಕವು 298.82 ಅಂಶಗಳಿಗೆ ಕುಸಿದು 38,811 ಅಂಶಗಳಿಗೆ ತಲುಪಿತು. ‘ನಿಫ್ಟಿ’ 80 ಅಂಶಗಳಿಗೆ ಕುಸಿದು 11,657 ಅಂಶಗಳಿಗೆ ತಲುಪಿತು.  ಜಾಗತಿಕ ಷೇರುಪೇಟೆಗಳಲ್ಲಿನ ದುರ್ಬಲ ವಹಿವಾಟು ಮತ್ತು ಡಾಲರ್‌ ಎದುರು ರೂಪಾಯಿ ವಿನಿಮಯ ದರ ಕುಸಿತವು ಹೂಡಿಕೆದಾರರ ಖರೀದಿ ಉತ್ಸಾಹ ಕುಂದಿಸಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಆರ್ಥಿಕತೆಯನ್ನು ಪ್ರಗತಿಯ ಹಾದಿಗೆ ಮರಳಿ ತರುವ, ನಗದು ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ, ಮುಂಗಾರು ಮಳೆಯ ಪ್ರಗತಿಯ ಬಗ್ಗೆ ಹೂಡಿಕೆದಾರರು ಇನ್ನು ಮುಂದೆ ಗಮನ ಕೇಂದ್ರೀಕರಿಸಲಿದ್ದಾರೆ’ ಎಂದು ಸೆಂಟ್ರಂ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಷೇರು ಸಲಹಾ ಮುಖ್ಯಸ್ಥ ದೇವಾಂಗ್‌ ಮೆಹ್ತಾ ವಿಶ್ಲೇಷಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !