ಸೋಮವಾರ, ಮೇ 17, 2021
21 °C

ಬ್ಯಾಂಕ್, ಹಣಕಾಸು ಷೇರು ಖರೀದಿ: ಸೆನ್ಸೆಕ್ಸ್ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಹೂಡಿಕೆದಾರರು ಬ್ಯಾಂಕಿಂಗ್, ಹಣಕಾಸು ಮತ್ತು ಐ.ಟಿ. ವಲಯದ ಷೇರುಗಳ ಖರೀದಿಗೆ ಹೆಚ್ಚಿನ ಗಮನ ನೀಡಿದ ಪರಿಣಾಮವಾಗಿ ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೂಚ್ಯಂಕಗಳು ಏರಿಕೆ ಕಂಡವು. ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಚೇತರಿಕೆ ಕಂಡಿದ್ದು ಹಾಗೂ ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು ಕೂಡ ಸೂಚ್ಯಂಕಗಳ ಏರಿಕೆಗೆ ಕಾರಣವಾದವು ಎಂದು ವರ್ತಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ 259 ಅಂಶ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕವಾದ ನಿಫ್ಟಿ 76 ಅಂಶ ಏರಿಕೆ ಕಂಡವು.

ಟಿಸಿಎಸ್ ಕಂಪನಿಯ ಷೇರುಗಳು ಅತ್ಯಂತ ಹೆಚ್ಚಿನ ಗಳಿಕೆ (ಶೇ 3.67ರಷ್ಟು) ಕಂಡವು. ಒಎನ್‌ಜಿಸಿ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಡಾ ರೆಡ್ಡೀಸ್, ಎಚ್‌ಡಿಎಫ್‌ಸಿ, ಎಕ್ಸಿಸ್ ಬ್ಯಾಂಕ್ ಮತ್ತು ಎಚ್‌ಸಿಎಲ್‌ ಟೆಕ್‌ ಕಂಪನಿಯ ಷೇರುಗಳು ಹೆಚ್ಚಿನ ಏರಿಕೆ ಕಂಡವು.

ಬುಧವಾರವಷ್ಟೇ ತ್ರೈಮಾಸಿಕ ಫಲಿತಾಂಶ ಘೋಷಿಸಿದ ಇನ್ಫೊಸಿಸ್‌ ಕಂಪನಿಯ ಷೇರು ಮೌಲ್ಯ ಶೇ 2.65ರಷ್ಟು ಇಳಿಕೆ ಕಂಡಿತು. ಕಂಪನಿಯ ಫಲಿತಾಂಶವು ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದುದು ಇಳಿಕೆಗೆ ಕಾರಣ ಎನ್ನಲಾಗಿದೆ. ಇಂಡಸ್‌ಇಂಡ್‌ ಬ್ಯಾಂಕ್, ಮಾರುತಿ, ನೆಸ್ಲೆ ಇಂಡಿಯಾ, ಬಜಾಜ್ ಫೈನಾನ್ಸ್ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್ ಕಂಪನಿಯ ಷೇರುಗಳು ಇಳಿಕೆ ಕಂಡವು.

ಅಮೆರಿಕದ ಡಾಲರ್ ಎದುರು ತುಸು ಚೇತರಿಕೆ ದಾಖಲಿಸಿದ ರೂಪಾಯಿ, 12 ಪೈಸೆಯಷ್ಟು ಮೌಲ್ಯ ಹೆಚ್ಚಿಸಿಕೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.