ಆಲ್ಟೊ ಕೆ10 ಬೆಲೆ ಏರಿಕೆ: ದೇಶದಾದ್ಯಂತ ತಕ್ಷಣವೇ ಜಾರಿ

ಶನಿವಾರ, ಏಪ್ರಿಲ್ 20, 2019
27 °C

ಆಲ್ಟೊ ಕೆ10 ಬೆಲೆ ಏರಿಕೆ: ದೇಶದಾದ್ಯಂತ ತಕ್ಷಣವೇ ಜಾರಿ

Published:
Updated:

ನವದೆಹಲಿ: ಮಾರುತಿ ಸುಜುಕಿ ಇಂಡಿಯಾದ (ಎಂಎಸ್‌ಐ) ಜನಪ್ರಿಯ ಕಾರ್‌, ‘ಆಲ್ಟೊ ಕೆ10’ ಬೆಲೆಯನ್ನು ಗರಿಷ್ಠ ₹ 23 ಸಾವಿರದವರೆಗೆ ಹೆಚ್ಚಿಸಲಾಗಿದೆ. ಬೆಲೆ ಹೆಚ್ಚಳವು ದೇಶದಾದ್ಯಂತ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಕಾರ್‌ನ ಮಾದರಿ ಆಧರಿಸಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ (ಎನ್‌ಸಿಆರ್‌) ಎಕ್ಸ್‌ಷೋರೂಂ ಬೆಲೆ ₹ 3.65 ಲಕ್ಷದಿಂದ ₹ 4.44 ಲ‌ಕ್ಷದವರೆಗೆ ಇರಲಿದೆ. ದೇಶದ ಇತರ ಭಾಗದಲ್ಲಿನ ಬೆಲೆಯು ₹ 3.75 ಲಕ್ಷದಿಂದ ₹ 4.54 ಲಕ್ಷದವರೆಗೆ ಇರಲಿದೆ.

ಈ ಕಾರ್‌ನಲ್ಲಿ,  ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಮ್‌ (ಎಬಿಎಸ್‌), ಚಾಲಕನಿಗೆ ಏರ್‌ಬ್ಯಾಗ್‌, ರಿವರ್ಸ್‌ ಪಾರ್ಕಿಂಗ್‌ ಸೆನ್ಸರ್‌, ಚಾಲಕ ಮತ್ತು ಮುಂಭಾಗದ ಆಸನದಲ್ಲಿ ‍ಪ್ರಯಾಣಿಸುವವರು ಸೀಟ್‌ ಬೆಲ್ಟ್‌ ಧರಿಸುವುದನ್ನು ನೆನಪಿಸುವ  ಸೌಲಭ್ಯದಂತಹ ಸುರಕ್ಷತಾ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಈ ಕಾರಣಕ್ಕೆ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು  ‘ಎಂಎಸ್‌ಐ’ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !