ಶುಕ್ರವಾರ, ನವೆಂಬರ್ 15, 2019
22 °C

ವಿಶೇಷ ಕೊಡುಗೆಗಳ ಫಲ: ಕೊನೆಗೂ ಹೆಚ್ಚಾಯಿತು ಮಾರುತಿ ಸುಜುಕಿ ಮಾರಾಟ

Published:
Updated:

ಬೆಂಗಳೂರು: ಬೆಲೆ ಕಡಿತ ಮತ್ತು ವಾರಂಟಿ ವಿಸ್ತರಣೆಯಂತಹ ವಿಶೇಷ ಕೊಡುಗೆಗಳ ಫಲವಾಗಿ ಮಾರುತಿ ಸುಜುಕಿಯ ವಾಹನಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ.

ಈ ವಿಶೇಷ ಕೊಡುಗೆಗಳ ಕಾರಣಕ್ಕೆ ಸೆಪ್ಟೆಂಬರ್‌ ತಿಂಗಳಲ್ಲಿನ ವಾಹನಗಳ ಮಾರಾಟವು ಜುಲೈ ಮತ್ತು ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಶೇ 18 ರಿಂದ ಶೇ 20ರಷ್ಟು ಹೆಚ್ಚಳ ಸಾಧಿಸಿದೆ. ಅಕ್ಟೋಬರ್‌ನಲ್ಲಿಯೂ ಉತ್ತಮ ಮಾರಾಟ ನಡೆಯುವ ನಿರೀಕ್ಷೆ ಇದೆ.

ಡೀಸೆಲ್‌ ಚಾಲಿತ ವಾಹನಗಳು ಮತ್ತು ಮಾಲಿನ್ಯ ನಿಯಂತ್ರಣದ ‘ಬಿಎಸ್‌–6’ ಮಾನದಂಡ ಹೊಂದಿದ ಎಂಟು ಬಗೆಯ ಕಾರುಗಳ ಮಾರಾಟ ಉತ್ತಮವಾಗಿದೆ. ‘ಹಬ್ಬದ ದಿನಗಳಲ್ಲಿ ಗ್ರಾಹಕರಿಗೆ ಕೊಡ ಮಾಡಿರುವ ಕೊಡುಗೆಗಳು ಗರಿಷ್ಠ ಮಟ್ಟದಲ್ಲಿವೆ. ಈ ಕೊಡುಗೆಗಳನ್ನು ನಿರಂತರವಾಗಿ ಕಾಯ್ದುಕೊಳ್ಳಲು ಸಾಧ್ಯವಾಗಲಾರದು’ ಎಂದು ‘ಎಂಎಸ್‌ಐ’ನ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)