ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾರುತಿ ಸುಜುಕಿ ಆಲ್ಟೋ, ಎಸ್-ಪ್ರೆಸ್ಸೊ ವಾಹನ ಬೆಲೆ ಇಳಿಕೆ

Published : 24 ಸೆಪ್ಟೆಂಬರ್ 2024, 14:49 IST
Last Updated : 24 ಸೆಪ್ಟೆಂಬರ್ 2024, 14:49 IST
ಫಾಲೋ ಮಾಡಿ
Comments

ಬೆಂಗಳೂರು: ದೇಶದ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ, ತನ್ನ ಮಾರುತಿ ಸುಜುಕಿ ಆಲ್ಟೋ ಕೆ10 (ವಿಎಕ್ಸ್‌ಐ) ಮತ್ತು ಎಸ್-ಪ್ರೆಸ್ಸೊ (ಎಲ್‌ಎಕ್ಸ್‌ಐ) ವಾಹನಗಳ ಬೆಲೆಯನ್ನು ಹಬ್ಬದ ಋತುವಿನ ಅಂಗವಾಗಿ ಕಡಿಮೆ ಮಾಡಿದೆ.

ಆಲ್ಟೋ ₹6,500 ಮತ್ತು ಎಸ್-ಪ್ರೆಸ್ಸೊ ₹2,000 ಕಡಿಮೆ ಮಾಡಿದೆ. ಇದರಿಂದ ಈ ಎರಡು ಮಾದರಿ ಕಾರುಗಳ ಎಕ್ಸ್ ಷೋರೂಂ ಬೆಲೆಯು ₹5 ಲಕ್ಷದೊಳಗೆ ಇಳಿಕೆಯಾಗಿದೆ.

ಕರ್ನಾಟಕದಲ್ಲಿ ಹೆಚ್ಚಿನ ಬೆಲೆಯ ವಾಹನಗಳ ಶೇ 15.54ಕ್ಕೆ ಹೋಲಿಸಿದರೆ ₹5 ಲಕ್ಷಕ್ಕಿಂತ ಕಡಿಮೆ ಎಕ್ಸ್ ಷೋರೂಂ ಬೆಲೆಯ ಕಾರುಗಳು ಶೇ 14.43ರಷ್ಟು ರಸ್ತೆ ತೆರಿಗೆಯನ್ನು ಆಕರ್ಷಿಸುತ್ತವೆ. ಕಡಿಮೆ ರಸ್ತೆ ತೆರಿಗೆಯಿಂದಾಗಿ ಹೆಚ್ಚುವರಿ ಪ್ರಯೋಜನವು ಆಲ್ಟೋ  ಮೇಲೆ ₹13,207 ಮತ್ತು ಎಸ್-ಪ್ರೆಸ್ಸೊ ಮೇಲೆ ₹7,887 ಆಗಿದೆ ಎಂದು ತಿಳಿಸಿದೆ.

‘ಗ್ರಾಹಕರಿಗೆ ಹಬ್ಬದ ಅಂಗವಾಗಿ ಅನುಕೂಲ ಕಲ್ಪಿಸಲು ವಾಹನಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಇದು ಕರ್ನಾಟಕದಲ್ಲಿನ ನಮ್ಮ ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನ ಮತ್ತು ಉಳಿತಾಯವನ್ನು ನೀಡುತ್ತದೆ. ಈ ಹಬ್ಬದ ಋತುವಿನಲ್ಲಿ ವಿಶೇಷವಾಗಿ ಸಣ್ಣ ಕಾರನ್ನು ಹೊಂದಲು ಯೋಜಿಸುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲಿದೆ’ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‍ನ ಮಾರ್ಕೆಟಿಂಗ್ ಮತ್ತು ಮಾರಾಟ ವಿಭಾಗದ ಹಿರಿಯ ಕಾರ್ಯ ನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT