ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲೆರಿಯೊ ಎಸ್‌–ಸಿಎನ್‌ಜಿ ಟ್ರಿಮ್‌ ಬಿಡುಗಡೆ

Last Updated 17 ಜನವರಿ 2022, 14:43 IST
ಅಕ್ಷರ ಗಾತ್ರ

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಸೆಲೆರಿಯೊ ಕಾರಿನ ಸಿಎನ್‌ಜಿ ಆವೃತ್ತಿಯನ್ನುದೇಶದ ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 6.58 ಲಕ್ಷ ಇದೆ.

ಇದು ಮುಂದಿನ ‍ಪೀಳಿಗೆಯ ಕೆ–ಸರಣಿಯ 1 ಲೀಟರ್‌ ಎಂಜಿನ್‌ ಹೊಂದಿದೆ. ಎಸ್‌–ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಹೊಸ ಸೆಲೆರಿಯೊ ಸಿಎನ್‌ಜಿಯ ಪ್ರತಿ ಕೆ.ಜಿ.ಗೆ 35.60 ಕಿಲೋ ಮೀಟರ್‌ ಮೈಲೇಜ್‌ ನೀಡಲಿದೆ. ಸಿಎನ್‌ಜಿ ಟ್ಯಾಂಕ್ ಸಾಮರ್ಥ್ಯವು 60 ಲೀಟರ್ ಇದೆ ಎಂದು ಕಂಪನಿಯು ತಿಳಿಸಿದೆ.

ಹೊಸ ಸೆಲೆರಿಯೊ ಎಸ್‌–ಸಿಎನ್‌ಜಿಯ ಇಂಧನ ಸಾಮರ್ಥ್ಯದ ಬಗ್ಗೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸುವ ವಿಶ್ವಾಸವಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT