ಬುಧವಾರ, ಸೆಪ್ಟೆಂಬರ್ 22, 2021
27 °C
ವಾಹನ ಪ್ರದರ್ಶನ ಮೇಳದಲ್ಲಿ ಎಸ್‌ಯುವಿ ಅನಾವರಣ

ಸುಜುಕಿ ಜಿಮ್ನಿ ಅನಾವರಣ

ಪಿಟಿಐ Updated:

ಅಕ್ಷರ ಗಾತ್ರ : | |

ಗ್ರೇಟರ್‌ ನೋಯಿಡಾ: ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಕಂಪನಿಯು ವಾಹನ ಪ್ರದರ್ಶನ ಮೇಳದಲ್ಲಿ ಶನಿವಾರ ಆಫ್‌ ರೋಡ್‌ ವೆಹಿಕಲ್‌ ಸುಜುಕಿ ಜಿಮ್ನಿ ಅನಾವರಣಗೊಳಿಸಿತು.

ನಾಲ್ಕನೇ ಪೀಳಿಗೆಯ ಸಣ್ಣ ಎಸ್‌ಯುವಿ, 1.5 ಲೀಟರ್ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಭಾರತದಲ್ಲಿ ಇದು ಖರೀದಿಗೆ ಲಭ್ಯವಿಲ್ಲ. ಆದರೆ, ಆಟೊ ಎಕ್ಸ್‌ಪೋದಲ್ಲಿ ಪ್ರದರ್ಶನ ಕಂಡಿರುವುದರಿಂದ ಶೀಘ್ರವೇ ಮಾರುಕಟ್ಟೆಗೆ ಬರುವ ನಿರೀಕ್ಷೆ ಮಾಡಬಹುದಾಗಿದೆ.

ಸದ್ಯ, 194 ದೇಶಗಳಲ್ಲಿ ಮಾರಾಟವಾಗುತ್ತಿದೆ. 28 ಲಕ್ಷಕ್ಕೂ ಅಧಿಕ ಮಾರಾಟ ಕಂಡಿದೆ.

‘ಭಾರತದ ಗ್ರಾಹಕರ ಗಮನ ಸೆಳೆಯುವ ಉದ್ದೇಶದಿಂದಲೇ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ’ ಎಂದು ಮಾರುತಿ ಸುಜುಕಿ ಇಂಡಿಯಾದ ಸಿಇಒ ಕೆನೆಚಿ ಆಯುಕಾವಾ ತಿಳಿಸಿದ್ದಾರೆ.

ವೃತ್ತಿಪರ ಬಳಕೆದಾರರ ಅಗತ್ಯಗಳು ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು