ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬ್ರೆಜಾ ಬುಕಿಂಗ್‌ ಆರಂಭ; ತಿಂಗಳಾಂತ್ಯಕ್ಕೆ ಬಿಡುಗಡೆ

Last Updated 20 ಜೂನ್ 2022, 10:48 IST
ಅಕ್ಷರ ಗಾತ್ರ

ನವದೆಹಲಿ: ಹೊಸ ಬ್ರೆಜಾ ಮಾದರಿಯ ಮುಂಗಡ ಬುಕಿಂಗ್‌ ಆರಂಭ ಆಗಿದ್ದು, ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ಸೋಮವಾರ ತಿಳಿಸಿದೆ.

ಆರಂಭಿಕ ಮೊತ್ತ ₹ 11 ಸಾವಿರ ಪಾವತಿಸಿ ಕಂಪನಿಯ ಷೋರೂಂಗಳಲ್ಲಿ ಅಥವಾ ಜಾಲತಾಣದಲ್ಲಿ ಮುಂಗಡ ಬುಕಿಂಗ್‌ ಮಾಡಬಹುದು ಎಂದು ಹೇಳಿದೆ.

ಹೊಸ ಕಾಂಪ್ಯಾಕ್ಟ್‌ ಎಸ್‌ಯುವಿನಲ್ಲಿ ಎಲೆಕ್ಟ್ರಿಕ್‌ ಸನ್‌ರೂಫ್‌, ಆರಾಮದಾಯಕ, ಅನುಕೂಲಕರ ವೈಶಿಷ್ಟ್ಯಗಳು ಇರಲಿವೆ. ಮುಂದಿನ ಪೀಳಿಗೆಯ 6–ಸ್ಪೀಡ್‌ ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆ ಇರಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಬ್ರೆಜಾ, ಸುಧಾರಿತ ವಿನ್ಯಾಸ, ತಂತ್ರಜ್ಞಾನ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಸಿ.ವಿ. ರಾಮನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT