ಭಾನುವಾರ, ಡಿಸೆಂಬರ್ 8, 2019
19 °C

ಜನವರಿಯಿಂದ ಮಾರುತಿ ಸುಜುಕಿ ಬೆಲೆ ಏರಿಕೆ

Published:
Updated:
Deccan Herald

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿ ಜನವರಿಯಿಂದ ಎಲ್ಲಾ ಮಾದರಿಗಳ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಹೇಳಿದೆ.

ಆದರೆ ಬೆಲೆ ಏರಿಕೆ ಪ್ರಮಾಣವನ್ನು ನಿಗದಿಪಡಿಸಿಲ್ಲ. ಮಾದರಿಗಳನ್ನು ಆಧರಿಸಿ ಬೆಲೆ ಏರಿಕೆ ನಿರ್ಧಾರವಾಗಲಿದೆ ಎಂದು ತಿಳಿಸಿದೆ.

ತಯಾರಿಕಾ ವೆಚ್ಚ ಹೆಚ್ಚಳ ಮತ್ತು ವಿದೇಶಿ ವಿನಿಮಯ ದರದಲ್ಲಿ ಏರಿಕೆ ಆಗಿರುವುದರಿಂದ ಬೆಲೆ ಏರಿಕೆಗೆ ನಿರ್ಧರಿಸಲಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಸದ್ಯ, ಕಂಪನಿಯು ₹ 2.53 ಲಕ್ಷದಿಂದ ₹ 11.45 ಲಕ್ಷದವರೆಗಿನ ಬೆಲೆಯ ವಾಹನಗಳನ್ನು ಮಾರಾಟ ಮಾಡುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು