ಬುಧವಾರ, ಸೆಪ್ಟೆಂಬರ್ 29, 2021
19 °C

ಸ್ವಿಫ್ಟ್‌, ಸಾನೆಟ್‌ ಮಾರಾಟ ದಾಖಲೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರು ಸ್ವಿಫ್ಟ್‌ನ ಒಟ್ಟು ಮಾರಾಟವು 25 ಲಕ್ಷದ ಮೈಲಿಗಲ್ಲು ದಾಟಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ಮಂಗಳವಾರ ತಿಳಿಸಿದೆ. ದೇಶದಲ್ಲಿ ಈ ಕಾರು ಬಿಡುಗಡೆ ಆದ 16 ವರ್ಷಗಳಲ್ಲಿ ಈ ಸಾಧನೆ ಆಗಿದೆ ಎಂದು ಹೇಳಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಮಾರಾಟದಲ್ಲಿ ಸ್ವಿಫ್ಟ್ ಕಾರು ಮೊದಲ ಸ್ಥಾನ ಪಡೆದಿತ್ತು. ಸ್ವಿಫ್ಟ್‌ ಮಾದರಿಯು 1.2 ಲೀಟರ್ ಪೆಟ್ರೋಲ್‌ ಎಂಜಿನ್‌ನೊಂದಿಗೆ ಮ್ಯಾನುಯಲ್‌ ಮತ್ತು ಆಟೊ ಗಿಯರ್ ಶಿಫ್ಟ್‌ ಟ್ರಾನ್ಸ್‌ಮಿಷನ್‌ ಆಯ್ಕೆಗಳಲ್ಲಿ ಲಭ್ಯವಿದೆ.

ಸ್ವಿಫ್ಟ್‌ ಬಳಸುತ್ತಿರುವವರಲ್ಲಿ ಶೇಕಡಾ 52ಕ್ಕಿಂತ ಹೆಚ್ಚು ಗ್ರಾಹಕರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಹೊಸ ಯುವ ಗ್ರಾಹಕರ ಬದಲಾಗುತ್ತಿರುವ ಆಕಾಂಕ್ಷೆಗಳನ್ನು ಈಡೇರಿಸಲು ಸ್ವಿಫ್ಟ್‌ ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಳ್ಳುತ್ತಿದೆ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

ಕಿಯಾ ಸಾನೆಟ್‌ ದಾಖಲೆ: ತನ್ನ ಕಾಂಪ್ಯಾಕ್ಟ್‌ ಎಸ್‌ಯುವಿ ‘ಸಾನೆಟ್‌’ ಮಾರುಕಟ್ಟೆಗೆ ಬಿಡುಗಡೆ ಆದ ಒಂದು ವರ್ಷದ ಒಳಗಾಗಿ 1 ಲಕ್ಷದಷ್ಟು ಮಾರಾಟ ಆಗಿದೆ ಎಂದು ಕಿಯಾ ಇಂಡಿಯಾ ಕಂಪನಿ ಮಂಗಳವಾರ ತಿಳಿಸಿದೆ.

ಈ ಅವಧಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಸ್‌ಯುವಿಗಳ ಸಾಲಿನಲ್ಲಿ ಸಾನೆಟ್ ನಾಲ್ಕನೇ ಸ್ಥಾನ ಪಡೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. 2020ರ ಸೆಪ್ಟೆಂಬರ್‌ನಲ್ಲಿ ಸಾನೆಟ್‌ ಬಿಡುಗಡೆ ಮಾಡಲಾಯಿತು. 1.5 ಲೀಟರ್ ಡೀಸೆಲ್‌ ಎಂಜಿನ್‌ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆ ಇದರಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು