ಶುಕ್ರವಾರ, ಜನವರಿ 24, 2020
21 °C

ಮರ್ಸಿಡಿಸ್‌ ಬೆಂಜ್‌: 3 ಗಂಟೆಯಲ್ಲಿ ಸರ್ವಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಲಾಸಿ ಕಾರ್‌ ತಯಾರಿಸುವ ದೇಶದ ಅತಿದೊಡ್ಡ ಕಂಪನಿಯಾಗಿರುವ ಮರ್ಸಿಡಿಸ್‌ ಬೆಂಜ್‌, 3 ಗಂಟೆಗಳಲ್ಲಿ ಸರ್ವಿಸ್‌ ಪೂರ್ಣಗೊಳಿಸುವ ವಿಶೇಷ ಸೇವೆಗೆ ಚಾಲನೆ ನೀಡಿದೆ.

ವಾಗ್ದಾನ ನೀಡಿದಂತೆ 3 ಗಂಟೆಗಳಲ್ಲಿ  ಸರ್ವಿಸ್‌ ಪೂರ್ಣಗೊಳ್ಳದಿದ್ದರೆ ಅದಕ್ಕೆ ಸರ್ವಿಸ್‌ ಶುಲ್ಕ ವಿಧಿಸುವುದಿಲ್ಲ.  ಈ ವಿಶೇಷ ಕೊಡುಗೆಯ ‘ಪ್ರೀಮಿಯರ್‌ ಎಕ್ಸ್‌ಪ್ರೆಸ್‌ ಪ್ರೈಮ್‌’ ಸೇವೆಗೆ ಸೋಮವಾರ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಸದ್ಯದಲ್ಲೇ ಈ ಸೌಲಭ್ಯವನ್ನು ದೆಹಲಿ, ಮುಂಬೈ, ಹೈದರಾಬಾದ್‌ ಮತ್ತು ಅಹ್ಮದಾಬಾದ್‌ನಲ್ಲಿ ಆರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ವಿಲಾಸಿ ಕಾರ್‌ ವಿಭಾಗದಲ್ಲಿ ದೇಶದಲ್ಲಿ ಈ ಬಗೆಯ ಸರ್ವಿಸ್‌ ಆರಂಭಿಸಿರುವುದು ಇದೇ ಮೊದಲ ಬಾರಿಗೆಯಾಗಿದೆ. ಈ ವಿಶೇಷ ಸರ್ವಿಸ್‌ನಲ್ಲಿ ಪ್ರಮುಖ ದುರಸ್ತಿ, ವಾರಂಟಿಗೆ ಸಂಬಂಧಿಸಿದ ದುರಸ್ತಿ ಮತ್ತು ಎಎಂಜಿ ವಾಹನಗಳು ಒಳಗೊಂಡಿರುವುದಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು