ಗುರುವಾರ , ನವೆಂಬರ್ 14, 2019
19 °C

ಮರ್ಸಿಡಿಸ್‌ ಬೆಂಜ್‌ ಹೊಸ ವಿ–ಕ್ಲಾಸ್‌ ಎಲೈಟ್

Published:
Updated:
Prajavani

ಚೆನ್ನೈ: ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಜ್‌, ಭಾರತದ ಮಾರುಕಟ್ಟೆಗೆ ಹೊಸ ವಿ–ಕ್ಲಾಸ್‌ ಎಂಪಿವಿ ಎಲೈಟ್‌ ಬಿಡುಗಡೆ ಮಾಡಿದೆ.

ವಿ–ಕ್ಲಾಸ್‌ ಮೂಲಕ ಭಾರತದಲ್ಲಿ ಐಷಾರಾಮಿ ಮಲ್ಟಿ ಪರ್ಪಸ್‌ ವೆಹಿಕಲ್‌ (ಎಂಪಿವಿ) ವಿಭಾಗವನ್ನು ಯಶಸ್ವಿಯಾಗಿ ಸೃಷ್ಟಿಸಿದ್ದು, ಅದರ ಮುಂದುವರಿದ ಭಾಗವಾಗಿ ಇದೀಗ ಹೊಸ ವಿನ್ಯಾಸದಲ್ಲಿ ಎಲೈಟ್‌ ಬಿಡುಗಡೆ ಮಾಡಲಾಗಿದೆ. ಇದರ ಎಕ್ಸ್ ಷೋ ರೂಂ ಬೆಲೆ ₹ 1.10 ಕೋಟಿ ಎಂದು ಕಂಪನಿಯ ಸಿಇಒ ಮಾರ್ಟಿನ್ ಶ್ವೆಂಕ್ ಮಾಹಿತಿ ನೀಡಿದರು.

‘ಐಷಾರಾಮಿ, ಆರಾಮದಾಯಕ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯುತ್ತಮ ಎಂಪಿವಿ ಆಗಿದೆ.

‘ಹಬ್ಬದ ಸಂದರ್ಭದಲ್ಲಿನ ಮಾರಾಟ ತೃಪ್ತಿ ತಂದಿದೆ. ದೇಶದ ಮಾರುಕಟ್ಟೆಗೆ ಮುಂದಿನ ವರ್ಷದಿಂದ ಪ್ರತಿ ತಿಂಗಳೂ ಹೊಸ ವಾಹನ ಬಿಡುಗಡೆ ಮಾಡುವ ಯೋಜನೆ ಹೊಂದಿದ್ದೇವೆ. ಹೊಸ ಉತ್ಪನ್ನಗಳು ಮತ್ತು ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸಂತೃಪ್ತಿಗೊಳಿಸಲಾಗುವುದು’ ಎಂದು ಹೇಳಿದರು.

ಎಂಜಿನ್: 2 ಲೀಟರ್ ಬಿಎಸ್–6, 1950 ಸಿಸಿ ಡೀಸೆಲ್ ಎಂಜಿನ್ 9ಜಿ ಟ್ರಾನಿಕ್ ಆಟೊ ಟ್ರಾನ್ಸ್‌ಮಿಷನ್ ಹೊಂದಿದೆ.

ವೈಶಿಷ್ಟ್ಯ: 6 ಏರ್ ಬ್ಯಾಗ್. ಸೆಂಟರ್ ಕನ್ಸೊಲ್ ವಿತ್ ರೆಫ್ರಿಜರೇಟರ್ ಕಂಪಾರ್ಟ್ ಮೆಂಟ್, ಎಲೆಕ್ಟ್ರಿಕ್‌ಸ್ಲೈಡಿನ ಮಗ್ ಡೋರ್, 360 ಡಿಗ್ರಿ ಕ್ಯಾಮೆರಾ ವಿತ್ ಆ್ಯಕ್ಟಿವ್ ಪಾರ್ಕ್ ಅಸಿಸ್ಟ್.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ಚೆನ್ನೈಗೆ ಭೇಟಿ ನೀಡಿದ್ದರು)
 

ಪ್ರತಿಕ್ರಿಯಿಸಿ (+)