ಎಂಎಫ್‌ ನಿರ್ವಹಣಾ ಸಂಪತ್ತು ವೃದ್ಧಿ

ಬುಧವಾರ, ಏಪ್ರಿಲ್ 24, 2019
27 °C

ಎಂಎಫ್‌ ನಿರ್ವಹಣಾ ಸಂಪತ್ತು ವೃದ್ಧಿ

Published:
Updated:
Prajavani

ಮುಂಬೈ: 2018–19ನೇ ಹಣಕಾಸು ವರ್ಷದಲ್ಲಿ ದೇಶದ ಮ್ಯೂಚುವಲ್‌ ಫಂಡ್‌ (ಎಂಎಫ್‌) ಸಂಸ್ಥೆಗಳ ನಿರ್ವಹಣಾ ಸಂಪತ್ತು ಮೌಲ್ಯವು ಶೇ 11ರಷ್ಟು ವೃದ್ಧಿಯಾಗಿದ್ದು, ₹ 23.80 ಲಕ್ಷ ಕೋಟಿಗೆ ತಲುಪಿದೆ.

2017–18ನೇ ಹಣಕಾಸು ವರ್ಷದಲ್ಲಿ ನಿರ್ವಹಣಾ ಸಂಪತ್ತು ₹ 21.36 ಲಕ್ಷ ಕೋಟಿ ಇತ್ತು.

ಹೂಡಿಕೆ ಹೆಚ್ಚಳದಿಂದಾಗಿ ಈ ಪ್ರಗತಿ ಸಾಧ್ಯವಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಹೇಳಿದೆ.

ಮಾರ್ಚ್‌ನಲ್ಲಿ  ₹ 22,357 ಕೋಟಿ ಹೊರಹೋಗಿದೆ. ಫೆಬ್ರುವರಿಯಲ್ಲಿ ₹ 20,083 ಕೋಟಿ ಹೂಡಿಕೆಯಾಗಿತ್ತು. 

2018–19ರಲ್ಲಿ ಹೂಡಿಕೆದಾರರು ಷೇರು ಸಂಬಂಧಿತ ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ₹ 1.11 ಲಕ್ಷ ಕೋಟಿ ಬಂಡವಾಳ ತೊಡಗಿಸಿದ್ದಾರೆ ಎಂದು ರೇಟಿಂಗ್‌ ಸಂಸ್ಥೆ ’ಇಕ್ರಾ’ ತಿಳಿಸಿದೆ.

2017–18ನೇ ಹಣಕಾಸು ವರ್ಷದಲ್ಲಿನ ₹ 1.71 ಲಕ್ಷ ಕೋಟಿ ಹೂಡಿಕೆಯನ್ನು ಗಮನಿಸಿದರೆ ಈ ಬಾರಿ ಹೂಡಿಕೆ ಶೇ 35ರಷ್ಟು ಇಳಿಕೆಯಾಗಿದೆ ಎಂದು ‘ಎಎಂಎಫ್‌ಐ’ ಮಾಹಿತಿ ನೀಡಿದೆ.

‘ಪಾಕಿಸ್ತಾನದೊಂದಿಗೆ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯನ್ನೂ ಒಳಗೊಂಡು 2018–19ರಲ್ಲಿ ಹಲವು ಬೆಳವಣಿಗೆಗಳಿಂದಾಗಿ ಮಾರುಕಟ್ಟೆ ಚಂಚಲವಾಗಿತ್ತು. ಹೀಗಾಗಿ ಹೂಡಿಕೆಯಲ್ಲಿ ಇಳಿಕೆ ಕಂಡುಬಂದಿದೆ’ ಎಂದು ಒಕ್ಕೂಟದ ಸಿಇಒ ಎನ್‌.ಎಸ್‌. ವೆಂಕಟೇಶ್‌ ತಿಳಿಸಿದ್ದಾರೆ.

2013–14ರಲ್ಲಿ ₹ 9,269 ಕೋಟಿ ಹೊರಹೋಗಿತ್ತು. ಆ ಬಳಿಕ ಮ್ಯೂಚುವಲ್‌ ಫಂಡ್‌ಗಳಲ್ಲಿ ನಿರಂತರವಾಗಿ ಹೂಡಿಕೆ ಹೆಚ್ಚುತ್ತಿದೆ. ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಜನಪ್ರಿಯವಾಗಿರುವುದರಿಂದಲೂ ಹಣದ ಹರಿವು ಏರಿಕೆ ಹಾದಿಯಲ್ಲಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !