ಭಾನುವಾರ, ಜೂನ್ 20, 2021
28 °C

ವಿದ್ಯುತ್‌ ಚಾಲಿತ ಹೊಸ ಎಂಜಿ ಜೆಡ್‌ಎಸ್‌

ಸುಬ್ರಮಣ್ಯ ಎಚ್.ಎಂ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಜೆಡ್‌ಎಸ್‌ ಹೆಸರಿನ ಸಂಪೂರ್ಣ ವಿದ್ಯುತ್‌ ಚಾಲಿತ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ‘ಜೆಡ್‌ಎಸ್‌’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಬ್ಯಾಟರಿ ತಯಾರಿಸುವ ಪ್ರಮುಖ ಕಂಪನಿ ‘ಸಿಎಟಿಎಲ್‌’ನ ಹೊಸ 44.5 ಕಿಲೊವಾಟ್‌ ಹಾಗೂ ಲಿಕ್ವಿಡ್-ಕೂಲ್ ಎಂಎನ್ಸಿ ವೈಶಿಷ್ಟ್ಯತೆಯ ಬ್ಯಾಟರಿಯನ್ನು ಈ ‘ಎಸ್‌ಯುವಿ’ ಹೊಂದಿದೆ. ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 340 ಕಿ.ಮೀ ಚಲಿಸಬಹುದು. ಕೇವಲ 8.5ಸೆಕೆಂಡ್‌ನಲ್ಲಿ 100ಕಿ.ಮೀ ವೇಗ ತಲುಪಬಲ್ಲ ಸಾಮರ್ಥ್ಯ‌ ಹೊಂದಿದೆ.

ಈ ‘ಎಸ್‌ಯುವಿ’ನಲ್ಲಿ ಚಾರ್ಜಿಂಗ್ ಕೇಬಲ್ ಕೂಡ ಇದೆ. ಇದನ್ನು ಬಳಸಿ ಎಲ್ಲಿ ಬೇಕಾದರೂ ಚಾರ್ಜ್ ಮಾಡಿಕೊಳ್ಳಬಹುದು. ಮನೆ ಹಾಗೂ ಕಚೇರಿಯಲ್ಲಿ ಚಾರ್ಜ್ ಮಾಡಿಕೊಳ್ಳಲು ಎಸಿ ಫಾಸ್ಟ್ ಚಾರ್ಜರ್ ಕೂಡ ಒದಗಿಸಲಾಗಿದೆ. ಕೆಲವು ಎಂಜಿ ಮೋಟರ್ ಷೋರೂಂಗಳಲ್ಲಿ ಡಿಸಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲು ಸಂಸ್ಥೆ ಚಿಂತನೆ ನಡೆಸಿದೆ.

ಮನೆಯಲ್ಲಿ ಚಾರ್ಜ್ ಮಾಡಲು 6ರಿಂದ 8 ತಾಸು ಬೇಕು. ಸೂಪರ್ ಫಾಸ್ಟ್ ಡಿಸಿ ಚಾರ್ಜರ್‌ನಿಂದ ಶೇ80ರಷ್ಟು ಚಾರ್ಜ್‌ ಕೇವಲ 50 ನಿಮಿಷದಲ್ಲಿ ಮಾಡಬಹುದು.

'ಈ ಎಲೆಕ್ಟ್ರಿಕ್ ‘ಎಸ್‌ಯುವಿ’ ಪರಿಸರ ರಕ್ಷಣೆಗೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡಲಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಯುರೋಪ್ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದು  ಯಶಸ್ಸು ಕಂಡಿದೆ. ಭಾರತಲ್ಲೂ ಯಶಸ್ಸು ಕಾಣಲಿದೆ ಎನ್ನುವ ವಿಶ್ವಾಸ ನಮ್ಮದು' ಎಂದು ಎಂಜಿ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಛಾಬಾ ಹೇಳಿದರು. ಈ ಎಸ್‌ಯುವಿ ಬೆಲೆ (ದೆಹಲಿ ಎಕ್ಸ್‌ಷೋರೂಂ ) ₹ 20 ಲಕ್ಷ ಇದೆ.

(ವರದಿಗಾರ, ಸಂಸ್ಥೆಯ ಆಹ್ವಾನದ ಮೇರೆಗೆ ದೆಹಲಿಗೆ ಭೇಟಿ ನೀಡಿದ್ದರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು