ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬೆಳೆಗಾರರಿಗೆ ನೆರವಾದಮೈಖೆಲ್‌ ಕ್ರೆಮರ್‌ ಸಂಸ್ಥೆ

Last Updated 16 ಅಕ್ಟೋಬರ್ 2019, 15:32 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷದ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಭಾರತೀಯ ಸಂಜಾತ ಅಭಿಜಿತ್‌ ಬ್ಯಾನರ್ಜಿ ಜತೆ ಹಂಚಿಕೊಂಡಿರುವ ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಅವರು ರಾಜ್ಯದ 15 ಸಾವಿರ ಕಾಫಿ ಬೆಳೆಗಾರರ ವರಮಾನ ಹೆಚ್ಚಳಕ್ಕೂ ಕಾರಣರಾಗಿದ್ದಾರೆ.

ಅವರು ಸ್ಥಾಪಿಸಿದ್ದ ಸಂಸ್ಥೆ ಮತ್ತು ಕಾಫಿ ಮಂಡಳಿ ನಡುವಣ ಸಹಯೋಗದ ಫಲವಾಗಿ ಕಾಫಿ ಬೆಳೆಗಾರರು ತಾವು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಉಚಿತ ಸಲಹೆ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ.

ಪ್ರಿಸಿಜನ್ ಅಗ್ರಿಕಲ್ಚರ್‌ ಡೆವಲಪ್‌ಮೆಂಟ್‌ನ (ಪಿಎಡಿ) ಸಹ ಸ್ಥಾಪಕರೂ ಆಗಿರುವ ಮೈಕಲ್‌ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿನ ತಂಡವು, ಕಾಫಿ ಮಂಡಳಿ ಸಹಯೋಗದಲ್ಲಿ ಬೆಳೆಗಾರರ ಸಂಕಷ್ಟಗಳನ್ನು ನಿವಾರಿಸಲು ಸಹಕರಿಸಿದೆ. ಇದರಿಂದ 15 ಸಾವಿರದಷ್ಟು ಕಾಫಿ ಬೆಳೆಗಾರರು ಪ್ರಯೋಜನ ಪಡೆದುಕೊಂಡಿದ್ದಾರೆ.

ವರ್ಷದ ಹಿಂದೆ ‘ಪಿಎಡಿ’ ಸಹಯೋಗದಲ್ಲಿ ಕಾಫಿ ಮಂಡಳಿಯು ‘ಕಾಫಿ ಕೃಷಿ ತರಂಗ ಸೇವೆ’ ಆರಂಭಿಸಲಾಗಿತ್ತು. ಇದರಡಿ ಕಾಫಿ ಕೃಷಿ ಚಟುವಟಿಕೆ ಬಗ್ಗೆ ವಾರಕ್ಕೊಮ್ಮೆ, ಪ್ರತಿ ದಿನದ ಮಾರುಕಟ್ಟೆ ಮಾಹಿತಿ ನೀಡಲಾಗುತ್ತಿತ್ತು. ಬೆಳೆಗಾರರು ಮಂಡಳಿಯ 080–3768 5000 ಸಂಖ್ಯೆಗೆ ಮಾಡುತ್ತಿದ್ದ ಮೊಬೈಲ್‌ ಮಿಸ್ಡ್‌ ಕಾಲ್‌ಗೆ ಪ್ರತಿಯಾಗಿ ವಾಪಸ್‌ ಉಚಿತ ಕರೆ ಮಾಡಿ ಮಾಹಿತಿ ನೀಡಲಾಗುತ್ತಿತ್ತು. ಬೆಳೆಗಾರರು ಎದುರಿಸುತ್ತಿದ್ದ ವಿವಿಧ ಸಮಸ್ಯೆಗಳಿಗೆ ತಜ್ಞರು ಪರಿಹಾರ ಸೂಚಿಸುತ್ತಿದ್ದರು. ಒಂದು ವರ್ಷದ ಮಟ್ಟಿಗೆ ಈ ಸೇವೆ ಒದಗಿಸಲಾಗಿದ್ದರೂ, ಬೆಳೆಗಾರರ ವರಮಾನ ಹೆಚ್ಚಿಸಲು ಇದು ಗಮನಾರ್ಹವಾಗಿ ನೆರವಾಗಿದೆ. ಸದ್ಯದಲ್ಲೇ ಈ ಸೌಲಭ್ಯವನ್ನು 50 ಸಾವಿರ ಬೆಳೆಗಾರರಿಗೆ ವಿಸ್ತರಿಸಲಾಗುವುದು ಎಂದು ಕಾಫಿ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT