ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೊಸಾಫ್ಟ್‌ನಿಂದ ಬೋಧಕ ಸಿಬ್ಬಂದಿಗೆಕ್ವಾಂಟಂ ಕಂಪ್ಯೂಟಿಂಗ್‌ ತರಬೇತಿ

Last Updated 24 ಆಗಸ್ಟ್ 2020, 17:10 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಬೋಧಕ ಸಿಬ್ಬಂದಿ ವರ್ಗಕ್ಕೆ ಕ್ವಾಂಟಂ ಕಂಪ್ಯೂಟಿಂಗ್ ಕೌಶಲ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೈಕ್ರೊಸಾಫ್ಟ್‌ ಕಂಪನಿಯು ‘ತರಬೇತುದಾರರಿಗೆ ತರಬೇತಿ’ ಕಾರ್ಯಕ್ರಮ ಆರಂಭಿಸಿದೆ. ಸೋಮವಾರದಿಂದ ಶನಿವಾರದವರೆಗೆ ಈ ಕಾರ್ಯಕ್ರಮ ನಡೆಯಲಿದೆ.

ಹೊಸ ಪ್ರಯೋಗಗಳ ಅನುವು ಮಾಡಿಕೊಡುವ ಕಂಪನಿಯ ಮೈಕ್ರೊಸಾಫ್ಟ್‌ ಗ್ಯಾರೇಜ್‌ ಕಾರ್ಯಕ್ರಮದ ಮೂಲಕ ಇದನ್ನು ಆಯೋಜಿಸಲಾಗಿದೆ. ಜೈಪುರದ ಮಾಳವಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಾಜಿಯಲ್ಲಿನ (ಎಂಎನ್ಐಟಿ) ಎಲೆಕ್ಟ್ರಾನಿಕ್ಸ್ ಮತ್ತು ಐಸಿಟಿ (ಇ&ಐಸಿಟಿ) ಅಕಾಡೆಮಿಗಳು ಹಾಗೂ ಪಟ್ನಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಐಐಟಿ ಕಾನ್ಪುರ, ಐಐಟಿ ಗುವಾಹತಿ, ಐಐಟಿ ರೂರ್ಕಿ, ಎಂಎನ್ಐಟಿ ಜೈಪುರ, ಎನ್ಐಟಿ ಪಟ್ನಾ, ಐಐಐಟಿ-ಡಿ ಜಬಲ್ಪುರ ಮತ್ತು ಎನ್ಐಟಿ ವಾರಂಗಲ್ ನಂತಹ ಇ&ಐಸಿಟಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ 900 ಕ್ಕೂ ಹೆಚ್ಚು ಬೋಧಕ ಸಿಬ್ಬಂದಿಗೆತರಬೇತಿ ನೀಡಲಾಗುತ್ತದೆ.

ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಫರ್ಮೇಷನ್‌ ಟೆಕ್ನಾಲಾಜಿ ಸಚಿವಾಲಯದ ಬೆಂಬಲದೊಂದಿಗೆ ಇ& ಐಸಿಟಿ ಅಕಾಡೆಮಿಗಳ ಮೂಲಕ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT