ಗುರುವಾರ , ಸೆಪ್ಟೆಂಬರ್ 19, 2019
29 °C

ಇಂದಿನಿಂದ ಗಣಿ ಸಮಾವೇಶ

Published:
Updated:

ಬೆಂಗಳೂರು: ಭಾರತೀಯ ಖನಿಜ ಉದ್ಯಮಗಳ ಒಕ್ಕೂಟವು (ಫಿಮಿ) ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಗುರುವಾರದಿಂದ (ಸೆಪ್ಟೆಂಬರ್ 12) ಮೂರು ದಿನಗಳ ಕಾಲ ‘ಗಣಿಗಾರಿಕೆ ಪರಿಶೋಧನೆ ಸಮಾವೇಶ ಮತ್ತು ವ್ಯಾಪಾರ ಪ್ರದರ್ಶನ’ (ಮೈನಿಂಗ್‌ ಮಾಜ್ಮಾ–2019) ಏರ್ಪಡಿಸಿದೆ.

ಗಣಿ ವಲಯದ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವ ಮೂಲಕ ದೇಶದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಗೆ ಯಾವ ರೀತಿಯಲ್ಲಿ ಗಮನ ಕೇಂದ್ರೀಕರಿಸಬೇಕು ಎನ್ನುವ ಬಗ್ಗೆ ಸಮಾವೇಶವು ಕೇಂದ್ರೀಕೃತವಾಗಿರಲಿದೆ ಎಂದು ‘ಫಿಮಿ’ ಅಧ್ಯಕ್ಷ ಸುನಿಲ್‌ ದುಗ್ಗಲ್‌ ಅವರು ತಿಳಿಸಿದರು.

ಕೇಂದ್ರ ಗಣಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದು, ಕೆನಡಾದ ಮೈನಿಂಗ್‌ ಟ್ರೇಡ್‌ ಅಸೋಸಿಯೇಷನ್‌ ಮತ್ತು ಪ್ರಾಸ್‌ಪೆಕ್ಟರ್ಸ್‌ ಆ್ಯಂಡ್‌ ಡೆವಲಪರ್ಸ್‌ ಅಸೋಸಿಯೇಷನ್‌ ಆಫ್‌ ಕೆನಡಾ ಬೆಂಬಲ ನೀಡಿದೆ.‌

Post Comments (+)