ಭಾನುವಾರ, ಸೆಪ್ಟೆಂಬರ್ 26, 2021
25 °C

ಸೆಪ್ಟೆಂಬರ್‌ನಲ್ಲಿ ಶೇ 25ರಷ್ಟು ತಯಾರಿಕೆ ಕಡಿತ: ಮಹೀಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸೆಮಿಕಂಡಕ್ಟರ್‌ ಕೊರತೆಯಿಂದಾಗಿ ಸೆಪ್ಟೆಂಬರ್‌ನಲ್ಲಿ ಏಳು ದಿನಗಳವರೆಗೆ ತಯಾರಿಕೆ ಮಾಡದೇ ಇರಲು ಮಹೀಂದ್ರ ಆ್ಯಂಡ್ ಮಹೀಂದ್ರ ನಿರ್ಧರಿಸಿದ್ದು, ಒಟ್ಟು ಉತ್ಪಾದನೆಯಲ್ಲಿ ಶೇ 25ರವರೆಗೂ ಕಡಿತ ಮಾಡುವುದಾಗಿ ಗುರುವಾರ ತಿಳಿಸಿದೆ.

ತನ್ನ ವಾಹನ ವಿಭಾಗವು ಸೆಮಿಕಂಡಕ್ಟರ್‌ ಕೊರತೆಯನ್ನು ನಿರಂತರವಾಗಿ ಎದುರಿಸುತ್ತಿದ್ದು, ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್‌ ನಿಯಂತ್ರಿಸಲು ಹೇರಿದ ಲಾಕ್‌ಡೌನ್‌ನಿಂದಾಗಿ ಪೂರೈಕೆಯು ಕೊರತೆಯೂ ಎದುರಾಗಿದೆ ಎಂದು ಷೇರುಪೇಟೆಗೆ ತಿಳಿಸಿದೆ.

ಆಗಸ್ಟ್‌ನಲ್ಲಿ ಕಂಪನಿಯು 15,973 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 13,651 ವಾಹನಗಳನ್ನು ಮಾರಾಟ ಮಾಡಿತ್ತು.

ಸೆಮಿಕಂಡಕ್ಟರ್‌ ಕೊರತೆಯಿಂದಾಗಿ ಸೆಪ್ಟೆಂಬರ್‌ನಲ್ಲಿ ವಾಹನಗಳ ಒಟ್ಟಾರೆ ತಯಾರಿಕೆಯು ಎಲ್ಲಾ ಘಟಕಗಳಲ್ಲಿ ಕೇವಲ ಶೇ 40ರಷ್ಟು ಇರುವ ನಿರೀಕ್ಷೆ ಮಾಡಲಾಗಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು