ಚಾರ್ಜಿಂಗ್‌ ವೇಳೆ ಮೊಬೈಲ್‌ ಬಳಕೆ ಎಷ್ಟು ಸುರಕ್ಷಿತ?

7

ಚಾರ್ಜಿಂಗ್‌ ವೇಳೆ ಮೊಬೈಲ್‌ ಬಳಕೆ ಎಷ್ಟು ಸುರಕ್ಷಿತ?

Published:
Updated:
Deccan Herald

ಚಾರ್ಜ್‌ಗೆ ಇಟ್ಟ ಮೊಬೈಲ್‌ಫೋನ್‌ ಬಳಸುತ್ತಿದ್ದಾಗ ಸಿಡಿದು ತೀವ್ರವಾಗಿ ಗಾಯಗೊಂಡ, ಕೆಲವೊಮ್ಮೆ ಮಾರಣಾಂತಿಕವಾಗಿ ಪರಿಣಮಿಸಿದ ಸುದ್ದಿಗಳು ವರದಿಯಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಇಂತಹ ವಿಡಿಯೊಗಳೂ ಹರಿದಾಡುತ್ತಿವೆ. ಹೀಗಾಗಿ ಮೊಬೈಲ್‌ಫೋನ್‌ ಚಾರ್ಜಿಂಗ್‌ಗೆ ಇಟ್ಟಾಗ ಮಾತನಾಡಿದರೆ ಸಿಡಿಯುತ್ತದೆ ಎಂಬುದು ಬಹುತೇಕ ಮೊಬೈಲ್‌ಫೋನ್ ಬಳಕೆದಾರರ ಅಭಿಪ್ರಾಯ.

ಆದರೆ, ಲ್ಯಾಪ್‌ಟ್ಯಾಪ್‌ಗಳನ್ನು ಚಾರ್ಜಿಂಗ್‌ಗೆ ಇಟ್ಟು ಬಳಸುತ್ತಿದ್ದಾಗ ಮಾತ್ರ ಯಾರೂ ಈ ಮಾತನ್ನು ಹೇಳುವುದಿಲ್ಲ. ಎರಡೂ ವಿದ್ಯುನ್ಮಾನ ಉಪಕರಣಗಳೇ, ಮೊಬೈಲ್‌ಫೋನ್‌ ಸಿಡಿಯುವ ಸಾಧ್ಯತೆ ಇದ್ದಾಗ ಲ್ಯಾಪ್‌ಟಾಪ್ ಕೂಡ ಸಿಡಿಯಬೇಕಲ್ಲವೇ?

ಮೊಬೈಲ್‌, ಲ್ಯಾಪ್‌ಟಾಪ್‌ ಇತ್ಯಾದಿ ಉಪಕರಣಗಳನ್ನು ಚಾರ್ಜ್‌ಗೆ ಇಟ್ಟಾಗ ಬಳಸುವುದು ಒಳಿತೊ, ಕೆಡಕೊ ಎಂಬುದಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ. ಮೊಬೈಲ್‌ಫೋನ್‌ ಚಾರ್ಜ್‌ಗೆ ಇಟ್ಟಾಗ ಮಾತನಾಡಿದರೆ ಸಿಡಿಯುತ್ತದೆ ಎಂಬುದು ಭ್ರಮೆಯಷ್ಟೇ. ನಿಜಕ್ಕೆ ಇಲ್ಲಿ ಮೊದಲು ಸಿಡಿಯುವುದು ಮೊಬೈಲ್‌ಫೋನ್‌ ಅಲ್ಲ. ಅದರೊಳಗಿನ ಬ್ಯಾಟರಿ. ಈ ಬ್ಯಾಟರಿ ಸಿಡಿಯುವುದಕ್ಕೆ ಮುಖ್ಯ ಕಾರಣ ಅಧಿಕ ಉಷ್ಣಾಂಶ. 

ಫೋನ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಚಾರ್ಜ್‌ಗೆ ಇಟ್ಟಾಗ ಅವು ಬಿಸಿಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸುತ್ತಿರಬೇಕು. ಬಿಸಿಯಾಗಿದೆ ಎಂದೆನಿಸಿದರೆ ಬಳಸದೇ ಇರುವುದು ಸೂಕ್ತ. ಈ ಸಾಧನಗಳು ಮಿತಿ ಮೀರಿ ಬಿಸಿಯಾಗಲು ಹಲವು ಕಾರಣಗಳಿರುತ್ತವೆ. 

ಮುಖ್ಯವಾಗಿ ಚಾರ್ಜರ್‌. ಹೆಚ್ಚು ವಿದ್ಯುತ್‌ ಪೂರೈಕೆಯಾದರೆ, ಅದನ್ನು ನಿರೋಧಿಸಿ, ಸಾಧನಕ್ಕೆ ತಕ್ಕಂತೆ ಪೂರೈಸುವ ಚಾರ್ಜರ್‌ ಇದ್ದರೆ ಈ ಸಮಸ್ಯೆ ಬಹುತೇಕ ಮಟ್ಟಿಗೆ ಇರುವುದಿಲ್ಲ. ಈಚೆಗೆ ಅಗ್ಗದ ಬೆಲೆಗೆ ಫೋನ್‌ಗಳು ಲಭಿಸುತ್ತಿವೆ ಆದರೆ ಅವುಗಳಲ್ಲಿ ಚಿಪ್‌, ಬೋರ್ಡ್‌ ಇತ್ಯಾದಿ ಗುಣಮಟ್ಟ ಹೇಗಿದೆ ಎಂಬುದನ್ನೂ ನೋಡಬೇಕು.

ಚಾರ್ಜ್‌ಗೆ ಇಟ್ಟ ಸ್ಥಳದ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಅಧಿಕವಾಗಿದ್ದರೆ ಅವು ಬಿಸಿಯಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ, ಫೋನ್ ಅಥವಾ ಲ್ಯಾಪ್‌ಟಾಪ್‌ನ ಬ್ಯಾಗ್ರೌಂಡ್‌ನಲ್ಲಿ ಯಾವುದಾದರೂ ಅಪ್ಲಿಕೇಷನ್ ಕ್ರಿಯಾಶೀಲವಾಗಿದ್ದರೆ ಕ್ಲೋಸ್‌ ಮಾಡಬೇಕು. ಕಾರಣ ಇವು ಕೂಡ ಒತ್ತಡ ಹಾಕುತ್ತವೆ. ಮೊಬೈಲ್‌ ಚಾರ್ಜ್‌ ಆಗುತ್ತಿರುವಾಗ ಅದರ ಮದರ್‌ಬೋರ್ಡ್‌ ಮೇಲೆ ಹೆಚ್ಚು ಒತ್ತಡ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಕರೆ ಮಾಡಿದರೆ ಮತ್ತಷ್ಟು ಒತ್ತಡ ಬೀರುವ ಸಾಧ್ಯತೆಯೂ ಇರುತ್ತದೆ.

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !