ನವದೆಹಲಿ: ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸುವ ಉದ್ದೇಶದಿಂದ ಮಿತವ್ಯಯದ ವಿವಿಧ ಕ್ರಮಗಳನ್ನು ಅನುಸರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ನಂತರದಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಕುಸಿದಿವೆ, ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಮತ್ತಷ್ಟು ದುರ್ಬಲಗೊಂಡಿದೆ.

ಸೋಮವಾರದ ವಹಿವಾಟಿನಲ್ಲಿ ಹೂಡಿಕೆದಾರರ ₹6 ಲಕ್ಷ ಕೋಟಿಗಿಂತ ಹೆಚ್ಚಿನ ಸಂಪತ್ತು ಕರಗಿದೆ. ಮೋದಿ ಅವರು ನೀಡಿರುವ ಕರೆಯು ದೇಶದ ಅರ್ಥ ವ್ಯವಸ್ಥೆ ಹಾಗೂ ರೂಪಾಯಿಯ ಸ್ಥಿರತೆ ಬಗ್ಗೆ ಕಳವಳ ಮೂಡಿಸಿದೆ.

ಸೋಮವಾರ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು 82 ಪೈಸೆಯಷ್ಟು ಕುಸಿದಿದ್ದು, 95.31ರ ಮಟ್ಟಕ್ಕೆ ತಲುಪಿದೆ.

ಷೇರುಪೇಟೆಗಳ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿವೆ. ಸೆನ್ಸೆಕ್ಸ್ 1,312 ಅಂಶ ಹಾಗೂ ನಿಫ್ಟಿ 360 ಅಂಶ ಇಳಿಕೆ ಕಂಡಿವೆ. ಗುರುವಾರ, ಶುಕ್ರವಾರ ಮತ್ತು ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ 2.5ರಷ್ಟು ಹಾಗೂ ನಿಫ್ಟಿ ಶೇ 2.1ರಷ್ಟು ಇಳಿಕೆ ಕಂಡಿವೆ.

ಅಮೆರಿಕ ಮತ್ತು ಇಸ್ರೇಲ್ ಜೊತೆಯಾಗಿ ಇರಾನ್ ಮೇಲೆ ಫೆಬ್ರುವರಿ 28ರಂದು ಸಮರ ಸಾರಿದಾಗಿನಿಂದಲೂ ಭಾರತದ ರೂಪಾಯಿ ಮೌಲ್ಯವು ಕುಸಿಯುತ್ತಿದೆ. ಆದರೆ ಮೋದಿ ಅವರು ಭಾನುವಾರ ನೀಡಿದ ಕರೆಯು ಅರ್ಥ ವ್ಯವಸ್ಥೆಯ ಮೇಲೆ ಉಂಟಾಗಿರುವ ಒತ್ತಡದ ಬಗ್ಗೆ ಕಳವಳ ಮೂಡುವಂತೆ ಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಹಣಕಾಸಿನ ಪರಿಸ್ಥಿತಿಯು ಬಿಗುವಿನ ಸ್ಥಿತಿ ತಲುಪಿದೆ ಎಂಬುದನ್ನು ಮೋದಿ ಅವರ ಕರೆಯು ಸೂಚಿಸುತ್ತಿದೆ ಎಂದು ಜಪಾನ್ ಮೂಲದ ಹಣಕಾಸು ಸೇವಾ ಸಂಸ್ಥೆ ನೊಮುರ ಹೇಳಿದೆ. ಭಾರತದ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಜಿಡಿಪಿಯ ಶೇ 2.4ಕ್ಕೆ ಹೆಚ್ಚಬಹುದು ಎಂದು ನೊಮುರ ಅಂದಾಜಿಸಿದೆ.

ಅಲ್ಲದೆ, ದೇಶದ ವಿತ್ತೀಯ ಕೊರತೆಯು ಒಟ್ಟು ಜಿಡಿಪಿಯ ಶೇ 4.6ಕ್ಕೆ ತಲುಪಬಹುದು ಎಂದೂ ಅದು ಎಚ್ಚರಿಸಿದೆ. ವಿತ್ತೀಯ ಕೊರತೆಯು ಜಿಡಿಪಿಯ ಶೇ 4.3ರಷ್ಟು ಇರಬಹುದು ಎಂದು ಬಜೆಟ್ ಅಂದಾಜಿನಲ್ಲಿ ಹೇಳಲಾಗಿದೆ.

ಕಚ್ಚಾ ತೈಲ ಖರೀದಿ ಹಾಗೂ ಚಿನ್ನದ ಆಮದಿಗಾಗಿ ಹೆಚ್ಚು ವೆಚ್ಚ ಮಾಡುತ್ತಿರುವುದು ಮತ್ತು ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತಿರುವುದು ಸಿಎಡಿ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣಗಳಾಗಿವೆ. ಸಿಎಡಿ ಹೆಚ್ಚುತ್ತಿರುವುದು ಅಂದರೆ ದೇಶವು ವಿದೇಶಿ ವಿನಿಮಯವನ್ನು ಗಳಿಸುವುದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಖರ್ಚು ಮಾಡುತ್ತಿದೆ ಎಂದಾಗಿದೆ.

ತೆಲಂಗಾಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು, ‘ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಗೆ ಮರಳಬೇಕು, ಚಿನ್ನ ಖರೀದಿಯನ್ನು ಒಂದು ವರ್ಷ ಮುಂದೂಡಬೇಕು, ಅನಗತ್ಯ ವಿದೇಶ ಪ್ರವಾಸ ಮಾಡಬಾರದು, ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯನ್ನು ತಗ್ಗಿಸಬೇಕು’ ಎಂದು ಹೇಳಿದ್ದರು.

‘ಈಗ ದೇಶದ ಹಣಕಾಸಿನ ಸ್ಥಿತಿ ಚೆನ್ನಾಗಿಯೇ ಇದೆ, ವಿದೇಶಿ ವಿನಿಮಯ ಸಂಗ್ರಹವು ಆರೋಗ್ಯಕರವಾಗಿದೆ. ಇದು ಸರ್ಕಾರಕ್ಕೆ ಕಚ್ಚಾ ತೈಲ ದುಬಾರಿ ಆಗಿರುವುದರ ಪರಿಣಾಮವನ್ನು ನಿಭಾಯಿಸಲು ಸಹಾಯ ಮಾಡುತ್ತಿದೆ. ಆದರೆ ಸಂಘರ್ಷವು ದೀರ್ಘಾವಧಿಗೆ ಮುಂದುವರಿದರೆ ಅರ್ಥ ವ್ಯವಸ್ಥೆಯ ಮೇಲಿನ ಒತ್ತಡ ಹೆಚ್ಚಾಗುತ್ತದೆ’ ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.