ನವದೆಹಲಿ: ದೇಶದ ನಾಗರಿಕರು ಇಂಧನ ಉಳಿತಾಯ ಮಾಡಬೇಕು, ಚಿನ್ನದ ಖರೀದಿಯನ್ನು ಮುಂದೂಡಬೇಕು ಮತ್ತು ಅನಗತ್ಯ ವಿದೇಶಿ ಪ್ರವಾಸಗಳನ್ನು ತಪ್ಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ದೇಶದ ವಿದೇಶಿ ವಿನಿಯಮ ಮೀಸಲು ಸಂಗ್ರಹವನ್ನು ಉಳಿಸಿಕೊಂಡು ಆರ್ಥಿಕ ಸ್ಥಿತಿಯನ್ನು ಸಮತೋಲನಕ್ಕೆ ತರುವ ಉದ್ದೇಶ ಇದರ ಹಿಂದಿದೆ.

ವಿದೇಶಿ ವಿನಿಮಯ: ಒಂದು ನೋಟ

ಅಂಕಿಅಂಶಗಳ ಪ್ರಕಾರ, ಭಾರತದ ವಿದೇಶಿ ವಿನಿಮಯ ಮೀಸಲು ಸುಮಾರು 690.69 ಬಿಲಿಯನ್ ಡಾಲರ್ (₹66.04 ಲಕ್ಷ ಕೋಟಿ) ಇದೆ. ಆರ್ಬಿಐ ಅಂಕಿಅಂಶಗಳ ಪ್ರಕಾರ, ಫೆಬ್ರುವರಿಯಲ್ಲಿ ಈ ಮೀಸಲು 728 ಬಿಲಿಯನ್ ಡಾಲರ್ಗೆ ಏರಿಕೆಯಾಗಿತ್ತು, ಆದರೆ ಜಾಗತಿಕ ಅನಿಶ್ಚಿತತೆ ತೀವ್ರಗೊಂಡ ಕಾರಣ ಏಪ್ರಿಲ್ ವೇಳೆಗೆ ಸುಮಾರು 691 ಬಿಲಿಯನ್ ಡಾಲರ್ಗೆ ಕುಸಿದಿದೆ.

ಅದೇ ಸಮಯದಲ್ಲಿ, 2026 ರಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ (ಸಿಎಡಿ) 84.5 ಬಿಲಿಯನ್ ಡಾಲರ್ಗೆ ಅಂದರೆ ಜಿಡಿಪಿಯ ಶೇ 2 ರಷ್ಟು ಏರಿಕೆಯಾಗಬಹುದು ಎಂದು ಐಎಂಎಫ್ ಅಂದಾಜಿಸಿದೆ. ಇದಕ್ಕೆ ಪ್ರಮುಖ ಕಾರಣ ಚಿನ್ನ. 2026ರ ಹಣಕಾಸು ವರ್ಷದಲ್ಲಿ ಭಾರತವು ಸುಮಾರು 72 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 24 ರಷ್ಟು ಅಧಿಕ.

8 ತಿಂಗಳು ಚಿಂತೆಯಿಲ್ಲ:

ಭಾರತದ ಪ್ರಸ್ತುತ ವಿದೇಶಿ ವಿನಿಮಯ ಮೀಸಲು ಸ್ಥಿತಿಯು 1991ರ ಪಾವತಿ ಬಾಕಿ ಬಿಕ್ಕಟ್ಟಿನ(ಒಂದು ದೇಶವು ತನ್ನ ಅಂತರರಾಷ್ಟ್ರೀಯ ವಹಿವಾಟುಗಳನ್ನು ನಿರ್ವಹಿಸಲು ಅಗತ್ಯವಾದ ವಿದೇಶಿ ವಿನಿಮಯ ಮೀಸಲು ಹೊಂದಿರದ ಸ್ಥಿತಿ) ಸಮಯಕ್ಕಿಂತ ಎಷ್ಟೋ ಪಟ್ಟು ಬಲವಾಗಿದೆ.

ಆ ಸಮಯದಲ್ಲಿ, ವಿದೇಶಿ ಕರೆನ್ಸಿಗಳ ಮೀಸಲು ನಿಧಿ 2.2 ಬಿಲಿಯನ್ ಡಾಲರ್ಗೆ ಕುಸಿದಿತ್ತು. ಚಿನ್ನವನ್ನೂ ಒಳಗೊಂಡಂತೆ ಒಟ್ಟು ಮೀಸಲು ನಿಧಿಯು 5.8 ಬಿಲಿಯನ್ ಡಾಲರ್ನಷ್ಟಿತ್ತು, ಇದು ವಾರ್ಷಿಕ ಆಮದಿನ ಕೇವಲ ಶೇ 24 ರಷ್ಟನ್ನು ಮಾತ್ರ ಭರಿಸುತ್ತಿತ್ತು. ಅಂದರೆ ಕೇವಲ ಎರಡು ವಾರ ಆಮದು ಮಾಡಿಕೊಳ್ಳುವ ಸಾಮರ್ಥ್ಯವನ್ನು ದೇಶ ಹೊಂದಿತ್ತು.

ಈಗಲೂ ಕೂಡ ಭಾರತದ ಮೀಸಲು ನಿಧಿಯು ಕೋವಿಡ್ನಲ್ಲಿದ್ದ ಮಟ್ಟಕ್ಕಿಂತಲೂ ಕಡಿಮೆ ಇದೆ. 2020-21ರಲ್ಲಿ ಆಮದು ಬಹಳ ಕಡಿಮೆ ಆದ ಪರಿಣಾಮ ಫಾರೆಕ್ಸ್ ನಿಧಿ 497 ದಿನಗಳ ಆಮದಿಗೆ ಆಗುವಷ್ಟು ಇತ್ತು. ಆದರೆ, ಈಗ ಆತಂಕದ ಅಗತ್ಯವಿಲ್ಲ. 2025-26ರಲ್ಲಿ ಇದು 260 ದಿನಗಳ ಆಮದಿಗೆ ಆಗುವಷ್ಟು ಇದೆ. ಐತಿಹಾಸಿಕ ಪ್ರಮಾಣದಿಂದ ನೋಡಿದಾಗ ಫಾರೆಕ್ಸ್ ನಿಧಿ ಸಾಕಷ್ಟಿದೆ.

ಈ ನಾಲ್ಕು ಸರಕುಗಳೇ ನಿರ್ಣಾಯಕ:

ಕಚ್ಚಾ ತೈಲ(134.7 ಬಿಲಿಯನ್ ಡಾಲರ್), ಚಿನ್ನ(72 ಬಿಲಿಯನ್ ಡಾಲರ್), ಖಾದ್ಯ ತೈಲ(19.5 ಬಿಲಿಯನ್ ಡಾಲರ್), ರಾಸಾಯನಿಕ ಗೊಬ್ಬರ(14.5 ಬಿಲಿಯನ್ ಡಾಲರ್).... ಈ ನಾಲ್ಕು ಸರಕುಗಳೇ ಭಾರತದ ಒಟ್ಟು ಆಮದಿನ ಶೇ. 31.1ರಷ್ಟಿದೆ. ಚಿನ್ನವೊಂದೇ ಒಟ್ಟು ಆಮದು ವೆಚ್ಚದ ಸುಮಾರು ಶೇ 10 ರಷ್ಟಿದೆ. ಈ ಕಾರಣಕ್ಕಾಗಿಯೇ ಇವುಗಳ ಬಳಕೆಯನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ದೇಶದ ಜನರಿಗೆ ಮನವಿ ಮಾಡಿದೆ.

ಚಿನ್ನದ ಬೇಡಿಕೆ ಕುಸಿದರೆ ಏನಾಗುತ್ತದೆ?

ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಖರೀದಿದಾರ ದೇಶವಾಗಿದ್ದು, ಹೆಚ್ಚಿನ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಪ್ರತಿ ಔನ್ಸ್ ಚಿನ್ನಕ್ಕೆ ಡಾಲರ್ನಲ್ಲಿ ಪಾವತಿಸುತ್ತದೆ. ಇದು ದೇಶದ ವಿದೇಶಿ ವಿನಿಯಮ ಸಂಗ್ರಹದ ಮೇಲೆ ಒತ್ತಡ ಬೀರುತ್ತಿದೆ.

ದೇಶದ ನಾಗರಿಕರು ಕನಿಷ್ಠ ಒಂದು ವರ್ಷ ಚಿನ್ನ ಖರೀದಿಸದಿರಲು ನಿರ್ಧರಿಸಿದರೂ ದೇಶದಿಂದ ಹೊರಹೋಗುವ ಹತ್ತಾರು ಬಿಲಿಯನ್ ಡಾಲರ್ ಹಣವನ್ನು ನೇರವಾಗಿ ತಡೆಯಬಹುದಾಗಿದೆ. ಚಿನ್ನದ ಆಮದಿನಲ್ಲಿ ಶೇ 30-40 ರಷ್ಟು ಇಳಿಕೆಯಾದರೂ 20ರಿಂದ 25 ಬಿಲಿಯನ್ ಡಾಲರ್ ಉಳಿಸಬಹುದಾಗಿದೆ. ಶೇ 50 ರಷ್ಟು ಇಳಿಕೆಯಾದರೆ 36 ಬಿಲಿಯನ್ ಡಾಲರ್ ಉಳಿಸಬಹುದಾಗಿದೆ. ಇದು ಅಂದಾಜಿಸಲಾದ ಚಾಲ್ತಿ ಖಾತೆ ಕೊರತೆಯ ಸುಮಾರು ಅರ್ಧದಷ್ಟಾಗುತ್ತದೆ.

ಭಾರತವು ಶೇ. 88ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದು ಅಗತ್ಯವೂ ಕೂಡ. ಚಿನ್ನವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಂಡರೆ, ಆ ಹಣವನ್ನು ಕಚ್ಚಾ ತೈಲ ಖರೀದಿಗೆ ಬಳಸಬಹುದಾಗಿದೆ.

ಎಲ್ಲಿ ಹೂಡಿಕೆ ಮಾಡಬಹುದು?

ಚಿನ್ನದ ಬದಲು ದೇಶದ ನಾಗರಿಕರು ಎಸ್ಐಪಿ, ಗೋಲ್ಡ್ ಇಟಿಎಫ್ ಮೇಲೆ ಹೂಡಿಕೆ ಮಾಡುವಂತೆ ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ. ಇದರಿಂದ ಚಿನ್ನದ ಆಮದು ಕಡಿಮೆ ಮಾಡಿ ಡಾಲರ್ ಹೊರಹರಿವನ್ನು ತಡೆಯಬಹುದಾಗಿದೆ. .

ಮೋದಿ ಕರೆ: ಯಾವ್ಯಾವ ವಲಯಗಳ ಮೇಲೆ ಪರಿಣಾಮ

ಪ್ರವಾಸ ಮತ್ತು ವಿಮಾನಯಾನ: ವಿದೇಶಿ ಪ್ರವಾಸ ಮತ್ತು ಡೆಸ್ಟಿನೇಶನ್ ವೆಡ್ಡಿಂಗ್ಗಳನ್ನು ಮುಂದೂಡುವಂತೆ ಕೋರಿರುವುದರಿಂದ ವಿಮಾನಯಾನ ಸಂಸ್ಥೆಗಳು ಮತ್ತು ಟ್ರಾವೆಲ್ ಏಜೆನ್ಸಿಗಳ ಷೇರುಗಳ ಮೇಲೆ ಪರಿಣಾಮ ಬೀರಿದೆ.

ಹೋಟೆಲ್ ಮತ್ತು ಆತಿಥ್ಯ: ಐಷಾರಾಮಿ ಹೋಟೆಲ್ಗಳು ಮತ್ತು ರೆಸಾರ್ಟ್ಗಳು ವಿದೇಶಿ ಪ್ರವಾಸಿಗರ ಕೊರತೆಯಿಂದಾಗಿ ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿದೆ.

ಪೆಟ್ರೋಲಿಯಂ ವಲಯ: ಇಂಧನ ಬಳಕೆ ಕಡಿಮೆ ಮಾಡುವ ಮತ್ತು ಸಾರ್ವಜನಿಕ ಸಾರಿಗೆ ಬಳಸುವ ಕರೆಯಿಂದಾಗಿ ಪೆಟ್ರೋಲಿಯಂ ಕಂಪನಿಗಳ ಷೇರು ವ್ಯವಹಾರದಲ್ಲಿ ಮಂದಗತಿ ಕಂಡುಬಂದಿದೆ.

ಗೊಬ್ಬರ ಮತ್ತು ಅಗತ್ಯ ವಸ್ತುಗಳು: ಖಾದ್ಯ ತೈಲ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡುವ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದ್ದು, ಈ ವಲಯಗಳು ಎಚ್ಚರಿಕೆಯ ವ್ಯಾಪಾರ ಯೋಜನೆಗಳನ್ನು ರೂಪಿಸುತ್ತಿವೆ.

(ಆಧಾರ: ಮನಿಕಂಟ್ರೋಲ್ ಡಾಟ್ ಕಾಂ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.